ತುತ್ತು ಅನ್ನ ತಿನ್ನುವ ಮೊದಲು ರೈತರನ್ನು ನೆನೆಯಬೇಕು : ಪಂಪಾಪತಿ.ಹೆಚ್.
ಕಂಪ್ಲಿ ಸಮೀಪದ ಎಮ್ಮಿಗನೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಆಚರಿಸಲಾಯಿತು..ನಂತರ ಟಿ.ರಾಮು ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ರೈತರಿಗೆ ಸರಿಯಾಗಿ ವಿದ್ಯುತ್. ಸರಿಯಾದ ರೀತಿಯಲ್ಲಿ ನೀರು.ಹಾಗೂ ರೈತ ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ಬೆಲೆಯನ್ನು ನಮ್ಮ ಸರಕಾರಗಳು ಸರಿಯಾಗಿ ಕೊಟ್ಟರೆ ರೈತರು ಇಡಿ ದೇಶಕ್ಕಲ್ಲಾ. ಇಡಿ ವಿಶ್ವಕ್ಕೆ ಅನ್ನ ಹಾಕುತ್ತಾರೆ ಎಂದರು.
ನಂತರ ಶಿಕ್ಷಕರಾದ ಪಂಪಾಪತಿ.ಹೆಚ್. ಅವರು ಮಾತನಾಡಿ 1979 ರಿಂದ 1980 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಚೌದರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಡಿಸೆಂಬರ್: 23 ರಂದು ರಾಷ್ಟ್ರೀಯ ರೈತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅವರ ಅಧಿಕಾರ ಅವಧಿಯಲ್ಲಿ ಅಂದು ರೈತರ ಯೋಗಕ್ಷೇಮವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ರೈತ ಪರ ಯೋಜನೆಗಳನ್ನು ಜಾರಿಗೆ ತಂದರು. ರೈತರು ಬೆವರು ಸುರಿಸಿ ಬೆಳೆದ ಬೆಳೆಗಳಿಂದಲೇ ನಮ್ಮ ಬದುಕು ಸಾಗುತ್ತಿದೆ. ಪ್ರಕ್ರತಿ ಸವಾಲುಗಳು ಹಾಗೂ ಮಾರುಕಟ್ಟೆಗಳ ಅಸ್ಥಿರತೆಗಳ ನಡುವೆಯೂ ಅನ್ನಧಾತರು ಈ ದೇಶದ ಭದ್ರತೆಯನ್ನು ಕಾಪಾಡುತ್ತಿದ್ದಾರೆ. ಅವರ ಶ್ರಮವನ್ನು ನಾವೂ ಸಧಾಕಾಲ ಸ್ಮರಿಸಬೇಕು.ರೈತರ ಗೌರವವೇ ರಾಷ್ಟ್ರದ ಗೌರವ..ರೈತನೇ ಈ ದೇಶದ ಬೆನ್ನೆಲುಬು ಎಂದು ರೈತರ ಅಭಿವೃದ್ಧಿಯ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.
ನಂತರ ಹಸಿರು ಸೇನೆಯ ಅಧ್ಯಕ್ಷರಾದ ವಿ.ವೀರೇಶ್ ಅವರು ಮಾತನಾಡಿ ರೈತರು ಭಾರತದ ಆರ್ಥಿಕತೆಗೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಎಲ್ಲಾ ಜವಾಬ್ದಾರಿಯುತ ರೈತರನ್ನು ಗೌರವಿಸಲು ಮತ್ತು ಪ್ರಶಂಸಿಸಲು ರಾಷ್ಟ್ರೀಯ ರೈತರ ದಿನಾಚರಣೆಯನ್ನು ಮಾಡುಲಾಗುತ್ತದೆ ಎಂದರು.
ನಂತರ ಯುವ ಮುಖಂಡರಾದ ರಾಜಣ್ಣ ಅವರು ಮಾತನಾಡಿ. ರೈತ ದೇಶದ ಬೆನ್ನೆಲುಬು ಆಗಿದ್ದು.ರೈತರು ಸಮರ್ಪಕವಾಗಿ ಬೆಳೆಗಳನ್ನು ಬೆಳೆಯಬೇಕೆಂದರೆ ನೀರು ಅವಶ್ಯಕವಾಗಿ ಬೇಕು.ಆದ್ದರಿಂದ ತುಂಗಭದ್ರಾ ಜಲಾಶಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ತುಂಗಭದ್ರಾ ಜಲಾಶಯವು ಲಕ್ಷಾಂತರ ಜೀವಿ ಹಾಗೂ ಜೀವಗಳಿಗೆ ಆಸರೆಯಾಗಿದೆ ಎಂದರು.
ನಂತರ ರೈತ ಸಂಘದ ಜಿಲ್ಲಾ ಉಪಾಧ್ಯಾಕ್ಷರಾದ ಪದ್ಮಾವತಿ ಅವರು ಮಾತನಾಡಿ. ಇವತ್ತಿನ ದಿನದಲ್ಲಿ ಪ್ರತಿಯೊಬ್ಬರು ಒಂದು ಅನ್ನದ ಹಗುಳನ್ನು ತಿನ್ನಬೇಕೆಂದರೆ ದೇವರಿಗಿಂತಲೂ ಮೊದಲು ರೈತರನ್ನು ನೆನೆಸಿಕೊಂಡು ಅನ್ನವನ್ನು ತಿನ್ನಬೇಕು. ಇಂದು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಅನ್ನವನ್ನು ಆನ್ ಲೈನ್ ನಲ್ಲಿ ಬೆಳೆಯುವುದಕ್ಕೆ ಬರುವುದಿಲ್ಲ ಅದನ್ನು ಭೂಮಿಯಿಂದ ಬೆಳೆದ ರೈತರಿಂದಲೇ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೂಗಪ್ಪ ಧಣಿ,ನಾಗರೆಡ್ಡಿ,ವೆಂಕಟರಾಮರೆಡ್ಡಿ, ಪದ್ಮಾವತಿ,ಪರಶುರಾಮ,ಬಿ.ವೀರೇಶ, ನಾರಾಯಣ, ಎಸ್.ರಾಮಪ್ಪ, ಮೌಲ, ಜಡೇಶರೆಡ್ಡಿ,ಅಂಗಡಿ ಕಿಶೋರ ಮುಂತಾದ ಗ್ರಾಮದ ಸಮಸ್ಥ ರೈತರು ಭಾಗವಹಿಸಿದ್ದರು.
