ಸಾವಿತ್ರಿ ಬಾಯಿಫುಲೆ ಅವರು ಇಡೀ ಸಮಾಜಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ. ರಾಮು.ಟಿ.
ಕಂಪ್ಲಿ : ಎಮ್ಮಿಗನೂರಿನ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿಯ ಅಂಗವಾಗಿ ಬಡ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ವಿತರಿಸುವುದರ ಮೂಲಕ ತುಂಭಾ ಅರ್ಥಪೂರ್ಣವಾಗಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಟಿ.ರಾಮು ಅವರು ಮಾತನಾಡಿ 19ನೇ ಶತಮಾನದ ಪ್ರಮುಖ ಸಮಾಜ ಸುಧಾರಕರ ಸಾಲಿನಲ್ಲಿ ನಿಲ್ಲುವ ಮಹಿಳೆ ಸಾವಿತ್ರಿಬಾಯಿ ಫುಲೆ.ಅವರು ಶಿಕ್ಷಕಿಯಾಗಿ.ಸಮಾಜ ಸುಧಾರಕಿಯಾಗಿ.ಕವಯಿತ್ರಿಯಾಗಿ.ಶಿಕ್ಷಣತಜ್ಞರಾಗಿ.ಜನ ಮಾನಸದಲ್ಲಿ ಗುರುತಿಸಿಕೊಂಡವರು. ಮಹಿಳಾ ಶಿಕ್ಷಣ.ಜಾತಿ ಸಮಸ್ಯೆಗಳ ವಿರುದ್ದ ಹೋರಾಡುವ ಮೂಲಕ ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಬದುಕು ಕಟ್ಟಿಕೊಟ್ಟು. ಮಹಿಳೆಯರ ಸಬಲೀಕರಣಕ್ಕಾಗಿ ಸಾವಿತ್ರಿಬಾಯಿ ಫುಲೆ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದರು.
ನಂತರ ಮಹಿಳಾ ರೈತ ಸಂಘದ ಉಪಾಧ್ಯಾಕ್ಷರಾದ ಶ್ರೀಮತಿ ಪದ್ಮಾವತಿ ಅವರು ಮಾತನಾಡಿ ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ಇವರ ಆದರ್ಶಗಳು ನಮಗೆ ಸ್ಪೂರ್ತಿದಾಯಕವಾಗಿದ್ದು ಪುರುಷರಷ್ಟೇ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದರು.
ನಂತರ ಶಿಕ್ಷಕರಾದ ಹೆಚ್.ಪಂಪಾಪತಿ ಅವರು ಮಾತನಾಡಿ ಈ ಸಮಾಜದಲ್ಲಿ 6 ವರ್ಷ ಮೀರಿದ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ನೀತಿ ಜಾರಿಯಲ್ಲಿದೆ.ಅದರಂತೆ ಸಂವಿಧಾನದ 21 ಎ ನಲ್ಲಿ ಎಲ್ಲಾರೂ ಕಡ್ಡಾಯ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು ಆಗಿದೆ.ಅನಾಧಿಕಾಲದಿಂದಲೂ ಮಹಿಳೆಯರಿಗೆ ಶಿಕ್ಷಣದಲ್ಲಿ ಉತ್ತಮ ಸ್ಥಾನಮಾನ ಸಿಕ್ಕಿರಲಿಲ್ಲ. ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗೆ ಸುಮಾರು 18 ಶಾಲೆಗಳನ್ನು ತೆರೆಯುವುದರ ಮೂಲಕ ಶಿಕ್ಷಣ ನೀಡಿದರು ಎಂದರು.
ಈ ಸಂದರ್ಭದಲ್ಲಿ ಜಡೇಶಸ್ವಾಮಿ.ಶಾಶ್ವತರೆಡ್ಡಿ.ಬಿ.ವೀರೇಶ.ಬಾಲೇಸಾಬ್.ನಾರಾಯಣ.ಶ್ರೀನೀವಾಸ.ಪವನ್.ಪ್ಯಾಟೆಗೌಡ. ಮಕ್ಕಳು ಸೇರಿದಂತೆ ಇತರರು ಇದ್ದರು.
