ಅನಾಮಧೇಯ ವ್ಯಕ್ತಿ ಮೃತ : ವಾರಸುದಾರರ ಪತ್ತೆಗೆ ಮನವಿ
ಕಂಪ್ಲಿ | ಮಾ.22
ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಳಹಳ್ಳಿ ತಾಂಡದ ಬಸ್ ನಿಲ್ದಾಣದ ಸಮೀಪ ಅನಾರೋಗ್ಯದಿಂದ ಬಳಲುತ್ತಿದ್ದ ಅನಾಮಧೇಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ವಾರಸುದಾರರ ಪತ್ತೆಗೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಚಹರೆ ಗುರುತು:
- ವಯಸ್ಸು: ಅಂದಾಜು 55-60 ವರ್ಷ
- ಎತ್ತರ: ಸುಮಾರು 4.3 ಅಡಿ
- ಕೂದಲು: ಕಪ್ಪು-ಬಿಳಿ ಮಿಶ್ರಿತ
- ಮೈಬಣ್ಣ: ಕಪ್ಪು
- ಉಡುಪು: ಕಡು ನೀಲಿ ಟಿ-ಶರ್ಟ್ ಮತ್ತು ಪ್ಯಾಂಟ್
ಘಟನೆ ವಿವರ:
08-03-2026 ರಂದು ಅರಳಹಳ್ಳಿ ತಾಂಡದ ಬಸ್ ನಿಲ್ದಾಣದ ಬಳಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆಯ ಮೇರೆಗೆ 09-03-2026 ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಯಿತು.
ಚಿಕಿತ್ಸೆ ಫಲಕಾರಿಯಾಗದೇ, 11-03-2026 ರಂದು ಬೆಳಿಗ್ಗೆ 11:50 ಗಂಟೆಗೆ ಮೃತಪಟ್ಟಿದ್ದಾರೆ.
ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಹಿತಿ ಇದ್ದರೆ ಸಂಪರ್ಕಿಸಿ:
📞 ಪೊಲೀಸ್ ಠಾಣೆ: 8277977722
📞 ಕಂಟ್ರೋಲ್ ರೂಮ್: 9480803000
📞 ಪೊಲೀಸ್ ಇನ್ಸ್‌ಪೆಕ್ಟರ್: 9480803038
ವರದಿ: ಸಿದ್ದಿ ಟಿವಿ

