ಎಮ್ಮಿಗನೂರಿನಲ್ಲಿ ಅಂಬೇಡ್ಕರ್ ವಿಚಾರ ಸಂಕೀರ್ಣ
ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಚಲವಾದಿ ಏರಿಯಾ 1ನೇ ವಾರ್ಡ್‌ನಲ್ಲಿ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವದ ಅಂಗವಾಗಿ “ಅಂಬೇಡ್ಕರ್ ಅವರ ವಿಚಾರ ಸಂಕೀರ್ಣ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಾದಿ ಸಿದ್ದಣ್ಣ ಪರಮೇಶ್ವರ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ಸಂದೇಶಗಳನ್ನು ಸ್ಮರಿಸಿದರು.
ಈ ಮಾತಿನಂತೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು ಎಂದು ಕರೆ ನೀಡಿದರು. ಶಿಕ್ಷಣವೇ ಶೋಷಣೆ ಹಾಗೂ ಅಸಮಾನತೆಯಿಂದ ಮುಕ್ತಿ ಪಡೆಯುವ ಪ್ರಮುಖ ಆಯುಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಅಂಬೇಡ್ಕರ್ ಅನುಯಾಯಿ ರಮೇಶ್ ಸುಗ್ಗೇನಳ್ಳಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ಬಾಲ್ಯದಿಂದ ಹಿಡಿದು ಜೀವನ ಪಯಣದಲ್ಲಿ ಎದುರಿಸಿದ ಸಂಕಷ್ಟಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟಗಳನ್ನು ವಿವರಿಸಿದರು.
ಅವರ ಜೀವನವೇ ಎಲ್ಲರಿಗೂ ಪ್ರೇರಣೆಯಾಗಿದ್ದು, ಸಮಾನತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಅವರ ಆದರ್ಶಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಸುರೇಶ್, ಸನೀಲ್, ಯೋಗರಾಜ್, ಸುರೇಶ್, ಚಂದ್ರು, ಬಸವರಾಜ್, ಈಶ್ವರಪ್ಪ, ಬಿ.ಸಿ. ಮಾರುತಿ, ಭೀಮಾಪ್ಪ, ಶ್ರೀನಿವಾಸ, ತೀಪ್ಪೇಶ, ರಾಮ, ಶರಣ, ಜಡೇಶ ಎಂ., ಜಡೇಶ ಸಿ. ಸೇರಿದಂತೆ ಅನೇಕ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ, ಅವರ ವಿಚಾರಗಳನ್ನು ಅರಿತುಕೊಂಡರು.
