ಆಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣ: ಮೂವರು ಬಂಧನ
ಕಂಪ್ಲಿ, ಏಪ್ರಿಲ್ 22: ಆಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಕುರುಗೋಡು ಪೊಲೀಸರು ಪತ್ತೆಹಚ್ಚಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಏಪ್ರಿಲ್ 21 ರಂದು ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲುಡಿ-ಕೊಟ್ಟಾಲ್ ಗ್ರಾಮದ ದೊಡ್ಡ ಕಾಲುವೆ ಹತ್ತಿರ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಆದೋನಿ ನಿವಾಸಿ ಶೇಕ್ಷಾವಲಿ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ವಿನೋದ್ ಹಾಗೂ ಹಾಲದಾಳ್ ವೀರಭದ್ರ ಎಂಬವರು ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದರು.
ಈ ಕುರಿತು ಮಾಹಿತಿ ಪಡೆದ ಕುರುಗೋಡು ಪೊಲೀಸ್ ಠಾಣೆಯ ಸುಪ್ರೀತ್.ವಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಜಯಕುಮಾರ್, ರಾಜಶೇಖರ್, ಆಂಜಿನಿ ಹಾಗೂ ಆಹಾರ ನಿರೀಕ್ಷಕರಾದ ಬಿ.ವಿರುಪಾಕ್ಷ ಗೌಡ ಅವರು ಜಂಟಿಯಾಗಿ ದಾಳಿ ನಡೆಸಿದರು.ದಾಳಿಯ ವೇಳೆ ಸುಮಾರು ₹87,300 ಮೌಲ್ಯದ 17.460 ಟನ್ ಪಡಿತರ ಅಕ್ಕಿ ಹಾಗೂ ಒಂದು ಐಚರ್ ಕಂಪನಿಯ ಲಾರಿ ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಕುರುಗೋಡು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 93/2026ರಂತೆ Essential Commodities Act ಅಡಿಯಲ್ಲಿ (ಸೆಕ್ಷನ್ 7, 3, 6(A)) ಪ್ರಕರಣ ದಾಖಲಿಸಲಾಗಿದೆ ಎಂದು ಬಳ್ಳಾರಿ ಎಸ್‌ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
{ ಅಧಿಕಾರಿಗಳು ಇತ್ತ ಗಮನಹರಿಸಲಿ}
ಇತ್ತಿಚ್ಚಿಗೆ ಕೆಲ ದಿನಗಳ ಹಿಂದೆ ಕುರುಗೋಡು ಠಾಣೆ ವ್ಯಾಪ್ತಿಯ ಕೊಟ್ಟಾಲ್ ಬಳಿ ವಾಹನವೊಂದರಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ನಡೆಸಲಾಗುತ್ತಿದೆ ಎಂಬ ಶಂಕೆ ಇದ್ದರು ಸಹ ಸ್ವತಃ ಆಹಾರ ನಿರೀಕ್ಷಕರಾದ ಬಿ.ವಿರುಪಾಕ್ಷ ಗೌಡ ರವರು ಆ ವಾಹನವನ್ನು ಬಿಡಿಸಿಕೊಂಡು ಹೋಗಿರುವ ಮಾಹಿತಿ ಸಿದ್ದಿ ಟಿವಿ ಬಳಿ ಇದೆ. ಇದರ ಬಗ್ಗೆ ಸಹ ತನಿಖೆಯಾಗಲಿ.
AP ಮೂಲದ ವಾಹನ ಸಂಖ್ಯೆ : AP39WD9652 (ದಿನಾಂಕ : ಏ.15,2026)
