ಅಲೆಮಾರಿ ಚೆನ್ನದಾಸರ ಸಮುದಾಯದ ವಿದ್ಯಾರ್ಥಿನಿಯ ಅದ್ಭುತ ಸಾಧನೆ
ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಅಲೆಮಾರಿ ಚೆನ್ನದಾಸರ ಸಮುದಾಯದ ವಿದ್ಯಾರ್ಥಿನಿ ಪೂಜಾ ಸಿ.ಡಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಶಾಲೆಗೆ ಸೇರುವ ಮೊದಲು ಕೇವಲ 41 ಅಂಕಗಳನ್ನು ಪಡೆದಿದ್ದ ಪೂಜಾ, ಅಲೆಮಾರಿ ವಿಶೇಷ ಕೋಟಾದಡಿ ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದರು. ಬಳಿಕ ಉತ್ತಮ ಶಿಕ್ಷಣ ಮತ್ತು ಪರಿಶ್ರಮದ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬರೋಬ್ಬರಿ 584 (93.44%) ಅಂಕಗಳನ್ನು ಗಳಿಸಿ ತಮ್ಮ ಶಾಲೆಗೆ 4ನೇ ಸ್ಥಾನ ಹಾಗೂ ಮೆಟ್ರಿ ಗ್ರಾಮಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪೂಜಾ ಅವರ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
