ರಾತ್ರೋರಾತ್ರಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಮೇಲೆ ತಮ್ಮ ಕೈ ಚಳಕ ತೋರಿದ ಖದೀಮರು,
ಕೃಷ್ಣರಾಜಪೇಟೆ : ತಾಲ್ಲೂಕಿನ ಚುಜ್ಜಲಕ್ಯಾತನಹಳ್ಳಿ ಗ್ರಾಮದ ಸಾರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಯಲ್ಲಿ ತಡರಾತ್ರಿ ಬೀಗ ಮುರಿದು ನಾಲ್ಕು ಭರ್ತಿ ಸಿಲಿಂಡರ್, ದಿನಸಿ ಪದಾರ್ಥಗಳ ಕಳ್ಳತನ ಮಾಡಿರುವ ಘಟನೆ ನೆಡೆದಿದೆ
ಕಳೆದೆ ಎಂಟು ತಿಂಗಳ ಇಂದೇ ಅಷ್ಟೇ ಅಂಗನವಾಡಿಯಲ್ಲಿ ಸಿಲಿಂಡರ್ ಕಳ್ಳತವಾಗಿತ್ತು ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಆದರೆ ಈಗ ಖದೀಮರು ಮೊತ್ತೊಮ್ಮೆ ಅಂಗನವಾಡಿ ಕೇಂದ್ರ ಮತ್ತು ಶಾಕೆಯಲ್ಲಿ ತಮ್ಮ ಕೈ ಚಳಕ ತೋರಿದ್ದಾರೆ.
ಸದ್ಯ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿ ಊಟಕ್ಕೆ ಯಾವುದೇ ತೊಂದರೆ ಆಗದಂತೆ ಶಾಲೆಯ ಮುಖ್ಯ ಶಿಕ್ಷಕ ಧರ್ಮಪ್ಪ ಬೇರೆ ವೈವಸ್ಯೆ ಮಾಡಿದ್ದು ಕಳ್ಳತನ ಆಗಿರುವ ಬಗ್ಗೆ ತಾಲ್ಲೂಕು ಕ್ಷೇತ್ರ ಶಿಕ್ಷಣದೀಕಾರಿಗಳ ಗಮನಕ್ಕೆ ತಂದಿದ್ದು ಮಕ್ಕಳ ಬಿಸಿ ಊಟಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಶಾಲೆಯ ಎಸ್ ಡಿ ಎಂ ಸಿ ಅದ್ಯಕ್ಷ ಜಯರಾಮು ಕಿಕ್ಕೇರಿ ಪೋಲೀಸ್ ಠಾಣೆಗೆ ದೂರು ನೀಡಿದ್ದು ಶೀಘ್ರವಾಗಿ ಖದೀಮರು ಯಾರೆಂದು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರಾದ ದೇವರಾಜು, ಮಲ್ಲೇಶ್, ಬಸವರಾಜು, ದೀಪು, ಶಿಕ್ಷಕಿ ನೇತ್ರ, ಅಂಗನವಾಡಿ ಕಾರ್ಯಕರ್ತೆ ಗೀತಾ, ಸಿಬ್ಬಂದಿ ರೇಣುಕಾ, ಕಮಲಮ್ಮ ಮತ್ತಿತ್ತರರು ಇದ್ದರು..
ವರದಿ : ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ