BJP : ಸಾಕ್ಷಾತ್ ಶ್ರೀರಾಮುಲು ಈ ಬಾರಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದ್ರೂ ನಾವು ಸೋಲಿಸುತ್ತೇವೆ

ಸಾಕ್ಷಾತ್ ಶ್ರೀರಾಮುಲು ಈ ಬಾರಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಬ‌ಂದರೂ ನಾವು ಅವರನ್ನು ಸೋಲಿಸುತ್ತೇವೆ , ಅವರ ಬೆಂಬಲಿತ ಅಭ್ಯರ್ಥಿ ಬಂದರೂ ಕೂಡ ಸೋಲಿಸುತ್ತೇವೆ ಎಂದು ಮೊಳಕಾಲ್ಮೂರಿನ ಬಿಜೆಪಿ ಮುಖಂಡರು ತಮ್ಮ ಆಕ್ರೋಶವನ್ನು ಹೊರಗೆ ಹಾಕಿದ ಘಟನೆ ನಡೆಯಿತು.

ಅವರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅವರ ಕಾರ್ಯಕರ್ತರ ಸಭೆಯಲ್ಲಿ‌ಮಾತನಾಡಿದರು.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲೆ  ಒಳ ಬೇಗುದಿ ಕುದಿಯುತ್ತಿದೆ. ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರಕ್ಕೆ ಕರೆ ತಂದು ಅವರಿಂದ ಕ್ಷೇತ್ರದ ಅಭಿವೃದ್ದಿ ಕಾಣಬೇಕು ಎಂದು ಬಯಸಿ ಇಲ್ಲಿನ‌ ಮುಖಂಡರು ಶ್ರೀರಾಮುಲು ಅವರನ್ನು ಗೆಲ್ಲಿಸಿ ಕಳುಹಿಸಿದ್ದರು. ಆದರೆ ಅವರು ಕ್ಷೇತ್ರದ ಅಭಿವೃದ್ದಿಗೆ ಬದಲಿಗೆ  ಸ್ವಜನ ಪಕ್ಷಪಾತವನ್ನು ಮಾಡಿದ್ದಾರೆ. ಮೊಳಕಾಲ್ಮೂರನ್ನು ಬಳ್ಳಾರಿಗೆ ಜೀದಾಳಾಗಿಸಿಕೊಳ್ಳಲು ಹೊರಟಿದ್ದಾರೆ. ಯಾರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್ ನಲ್ಲಿದ್ದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಅವರಿಗೆ ಎರಡು ಕೋಟಿ‌ ಕೊಟ್ಟು ಚುನಾವಣೆಗೆ  ನಿಲ್ಲಿಸಲು  ಹೊರಟಿದ್ದಾರೆ. ಆದ್ದರಿಂದ ಮೊಳಕಾಲ್ಮೂರಿನ ಕ್ಷೇತ್ರದ ಜನತೆಗೆ ಸ್ವಾಭಿಮಾನ ಹೆಚ್ಚಿದೆ. ಈ ಬಾರಿ ಶ್ರೀರಾಮುಲು ಬೆಂಬಲಿತ ತಿಪ್ಪೇಸ್ವಾಮಿ‌ ಬಿಟ್ಟು, ಜಯಪಾಲಯ್ಯ ಅವರಿಗೆ ಟಿಕೇಟ್ ನೀಡಬೇಕು ಬಿಜೆಪಿ ಗೆಲ್ಲಿಸಲು  ಬಲ ಪಡಿಸಬೇಕು, ಇಲ್ಲದೇ ಹೋದರೆ ನಾವು ಶ್ರೀರಾಮುಲು ಅಲ್ಲ ಅವರು ಬೆಂಬಲಿತ ಅಭ್ಯರ್ಥಿ ಯಾರೇ ಬಂದರೂ ಕೂಡ ಅವರನ್ನು ಸೋಲಿಸುವುದು  ಖಂಡಿತ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಕ್ಷೇತ್ರದ  ಆಕಾಂಕ್ಷಿತ ಅಭ್ಯರ್ಥಿ ಜಯಪಾಲಯ್ಯ ಅವರು, ನಾನೂ ಕೂಡ ಉತ್ತಮ ಸೇವೆಯನ್ನು ಮಾಡಿಕೊಂಡು ಬಂದಿದ್ದೇನೆ, ನಾನು ಕ್ಷೇತ್ರ ಬಿಟ್ಟ ಮೇಲೆ  ನೀವೆ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿ‌ ಮಾತು ಕೊಟ್ಟಿದ್ದರು. ಆದರೆ ಇಂದು ಅವರು ಬೇರೆಯವರಿಗೆ ಬೆಂಬಲಿಸುತ್ತಿದ್ದಾರೆ ಆದರೆ ಪಕ್ಷ ನನಗೆ ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಚಳ್ಳಕೆರೆ ಕ್ಷೇತ್ರದಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದೇನೆ, ಕ್ಷೇತ್ರದ ನಾಡಿ‌ಮಿಡಿತ ನನಗೆ ತಿಳಿದಿದೆ.ಆದ್ದರಿಂದ ಬಿಜೆಪಿ ಪಕ್ಷ ಹಾಗೂ ಮುಖಂಡರು ನನಗೆ ಟಿಕೇಟ್ ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಬಿಜೆಪಿ‌ ಮುಖಂಡ ನಾಗಿರೆಡ್ಡಿ ಮಾತನಾಡಿ,ಶ್ರೀರಾಮುಲು ಮೊಳಕಾಲ್ಮೂರು‌ಕ್ಷೇತ್ರವು ಯಾವುದೇ ಅಭಿವೃದ್ದಿಯಾಗಿಲ್ಲ, ಶ್ರೀರಾಮುಲು ಅವರು ಕೇವಲ ತಮ್ಮ ಸಂಬಂಧಿಕರನ್ನು ಬೆಳೆಸಿದ್ದಾರೆ.‌ಬರಪೀಡಿತ ಪ್ರದೇಶವಾದ ಮೊಳಕಾಲ್ಮೂರಿಗೆ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ, ಇದರಿಂದ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ. ಈ‌ ಬಾರಿ  ಮೂವರು ಆಕಾಂಕ್ಷಿಗಳಿದ್ದಾರೆ, ಅವರಲ್ಲಿ ಯಾರಿಗೆ ಕೊಟ್ಟರೂ ಕೂಡ ನಾವು ಒಗ್ಗಟ್ಟಾಗಿ  ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷವನ್ನು ಗೆಲ್ಲಿಸುತ್ತೇವೆ, ಇಲ್ಲವೇ ನಾವು ಮುಂದಿನ ದಿನಗಳಲ್ಲಿ ನಮ್ಮ ತೀರ್ಮಾನವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು‌ ನೀಡಿದರು.

ಸಾವಿರಾರು ಕಾರ್ಯಕರ್ತರು ಹಾಗು ಜಯಪಾಲಯ್ಯ ಅವರ ಬೆಂಬಲಿಗರ ಸಭೆಯನ್ನು  ಇಂದುನಕಾಲುವೆ ಹಳ್ಳಿಯಲ್ಲಿ ನಡೆಸಿದ್ದು, ಸಭೆಯಲ್ಲೂ ಕೂಡ ಮೊಳಕಾಲ್ಮೂರು‌ಕ್ಷೇತ್ರಕ್ಕೆ ಅನ್ಯಾಯವಾಗಿದ್ದು, ಈ ಬಾರಿ ಸರಿ‌ಪಡಿಸಬೇಕು ಎಂದು ಜಯಪಾಲಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬ್ಯೀರೋ ರೀಪೋರ್ಟ್, ಸಿದ್ದಿ ಟಿವಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">