ಶಾಸಕರ ಸರಳ ವ್ಯಕ್ತಿತ್ವವನ್ನು ಮೆಚ್ಚಿ ಕಮಲ ಬಿಟ್ಟು ಕೈ ಸೇರಿದ ಕಾರ್ಯಕರ್ತರು
ಸಿಂಧನೂರು :
ಸಿಂಧನೂರು ತಾಲೂಕಿನ ಕುರುಕುಂದಿ ಗ್ರಾಮದಲ್ಲಿ ಶುಕ್ರವಾರ 50ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಆರ್ ಬಸನಗೌಡ ತುರ್ವಿಹಾಳ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಹನುಮೇಶ್ ಬಾಗೋಡಿ ಯುತ್ ಕಾಂಗ್ರೆಸ್ ಅಧ್ಯಕ್ಷ ಮಾತನಾಡಿ ಶಾಸಕರ ಕಾರ್ಯವೈಖರಿ ಹಾಗೂ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮೆಚ್ಚಿ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅವರ ಪರ ದುಡಿದು ಮತ್ತೆ ಮಸ್ಕಿ ಕ್ಷೇತ್ರದ ಶಾಸಕರನ್ನಾಗಿ ಬಹುದೊಡ್ಡ ಮತಗಳ ಅಂತರದಿಂದ ಗೆಲ್ಲಿಸಿ ತರುತೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುರುಕುಂದಿ ಗ್ರಾಮದ ಗುಡದಪ್ಪ ಪೊಲೀಸ್ ಪಾಟೀಲ್,ಶೇಷಗಿರಿ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರು,ಶಿವನಗೌಡ ಪೊಲೀಸ್ ಪಾಟೀಲ್,ಮಲ್ಲನಗೌಡ ಪೊಲೀಸ್ ಪಾಟೀಲ್, ಸಣ್ಣ ನಾಗಪ್ಪ ಬವಿತಾಳ,ಯಂಕಪ್ಪ ತಾವರಗೇರಾ, ತಾಯಪ್ಪ ಬವಿತಾಳ್, ಇವರೆಲ್ಲರೂ ಶಾಸಕರ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರ ಸಮ್ಮುಖದಲ್ಲಿ 50 ಕ್ಕು ಹೆಚ್ಚು ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು.
ವರದಿ : ಮೆಹಬೂಬ್ ಮೊಮಿನ್
Tags
ರಾಜಕೀಯ