ಕುಷ್ಟಗಿ ರೈತರಿಗೆ ವಿವಿಧ ಬಗೆಯ ತರಕಾರಿ ಬೀಜಗಳ ಕಿಟ್ಟ ವಿತರಣೆ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘ ಕಲಬುರ್ಗಿ ಇವರಿಂದ ಕುಷ್ಟಗಿ ನಗರದ ಮಲ್ಲಿಕಾರ್ಜುನ್ ಭವನದಲ್ಲಿ ಶುಕ್ರವಾರರಂದು ತರಕಾರಿ ಬೆಳೆಯುವ ರೈತರಿಗೆ ಬೀಜದ ಕಿಟ್ಟು ಗಳನ್ನು ವಿತರಣೆ ಮಾಡಲಾಯಿತು.
ಈ ಒಂದು ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ರೈತ ಸಂಘ ಹಸಿರು ಸೇನೆ ನಿಯೋಜಿತ ಅಭ್ಯರ್ಥಿ ಹಾಗೂ ರೈತ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ನಜೀರ್ ಸಾಬ್ ಮೂಲಿಮನಿ ರೈತರು ಅಭಿವೃದ್ಧಿ ಆಗಬೇಕು ಆರ್ಥಿಕ ಸದೃಢರಾಗಬೇಕು ಉತ್ತಮ ಬೆಳೆ ಬೆಳೆದು ಪ್ರತಿಯೊಬ್ಬ ರೈತನಿಗೂ 10 ಕಿಟ್ಟುಗಳನ್ನು ವಿತರಿಸಲಾಗುತ್ತಿದ್ದು ಇದರಲ್ಲಿ ಐದು ತಳಿಯ ಗುಡಮಟ್ಟದ ಉತ್ತಮ ಬೀಜಗಳು ಒಂದಿದ್ದು ರೈತರು ಇದನ್ನು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗಪಡಿಸಿ ಕೊಳ್ಳಬೇಕು ಕೆಲವು ರೈತರು ತರಕಾರಿ ಬೀಜಗಳನ್ನು ತೆಗೆದುಕೊಂಡು ಬಿತ್ತಲಾರದೆ ಮನೆಯಲ್ಲಿ ಇಟ್ಟುಕೊಂಡು ಕೆಡಿಸುವಂತಹ ಉದಾರಗಳಿವೆ ಬೀಜಗಳನ್ನು ಕೆಡಿಸಬಾರದು ನಿಮಗ ಇಷ್ಟ ಇಲ್ಲ ಎಂದರೆ ನೆರೆಹೊರೆಯ ಜಮೀನು ಖಾಲಿ ಇರುವ ಅಸಕ್ತಿ ರೈತರಿಗೆ ಬೀಜಗಳ ಕಿಟ್ಟನ್ನು ನೀಡಿ ಸಹಾಯ ಮಾಡಿ ಉಚಿತವಾಗಿ ರೈತರಿಗೆ ಬೀಜವನ್ನು ವಿತರಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಗೆ ಸಂಘದ ಹೆಸರು ಉಳಿಯುವಂತಾಗಬೇಕೆಂದು ರೈತರಗೆ ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಯೋಜಕರಾದ ಶೇಖರ್ ಕಡಾದ್ ತಾಲೂಕು ಸಂಜಕರಾದ ಬುಡ್ಡನಗೌಡ. ಬಸವರಾಜ ರೇಖಾ ಹಿರೇಮಠ್ ಬೆಟ್ಟಪ್ಪ ಯತ್ನಟ್ಟಿ ಹಾಗೂ ವಿಕಾಸ್ ಅಕಾಡೆಮಿಯ ಸಂಚಾಲಕರಾದ ಕಿಶೋರ್ ಸ್ವಾಮಿ ಹಿರೇಮಠ್ ಇನ್ನು ಅನೇಕ ಮಹಿಳಾ ರೈತರು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ದೋಟಿಹಾಳ, ಕುಷ್ಟಗಿ
Tags
ಟಾಪ್ ನ್ಯೂಸ್