ಕೊಪ್ಪಳ ಜಿಲ್ಲೆಯವರೇ ಅಚ್ಚ ಕನ್ನಡಿಗರು : ಹಾಲಪ್ಪ ಆಚಾರ್
ಕುಕನೂರು : ರಾಜ್ಯದಲ್ಲಿ ಅಚ್ಚ ಕನ್ನಡಿಗರು ಕೆಚ್ಚೆದೆಯ ಕನ್ನಡಿಗರು ಅಂತೇನಾದ್ರೂ ಇದ್ದರೆ ಅದು ಕೊಪ್ಪಳ ಜಿಲ್ಲೆಯವರು ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿದರು.
ರಾಜೂರು ಗ್ರಾಮದಲ್ಲಿ ಲಿ. ಶ್ರೀ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಗಳ ವೇದಿಕೆಯಲ್ಲಿ ಕುಕನೂರು ತಾಲೂಕಿನ ಅದ್ದೂರಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು.
ಮದ್ಯ ಕರ್ನಾಟಕದ ಕೊಪ್ಪಳ ಜಿಲ್ಲೆ ಅನ್ಯ ಭಾಷಿಕರ ಪ್ರಭಾವಕ್ಕೆ ಒಳ ಪಟ್ಟಿಲ್ಲ ಕೊಪ್ಪಳ ಜಿಲ್ಲೆಯರು ನಿಜವಾದ ಅಚ್ಚ ಕನ್ನಡಿಗರು, ಕೆಚ್ಚೆದೆಯ ಕನ್ನಡಿಗರು, ರಾಯಚೂರು ನಲ್ಲಿ ತೆಲುಗು ಪ್ರಭಾವ, ಬೆಳಗಾವಿ ಯಲ್ಲಿ ಮರಾಠಿ ಪ್ರಭಾವ, ಮಂಗಳೂರು ಕಡೆ ಕೊಂಕಣಿ, ಮಲೆಯಾಳಿ ಪ್ರಭಾವ, ಕೆಲವಡೆ ಹಿಂದಿ ಪ್ರಭಾವ ಇದೆ, ಆದರೆ ಕೊಪ್ಪಳ ಜಿಲ್ಲೆ ಮದ್ಯ ಕರ್ನಾಟಕದಲ್ಲಿರುವುದರಿಂದ ಇಲ್ಲಿ ಯಾವ ಅನ್ಯ ಭಾಷಿಕರ ಪ್ರಭಾವ ಇಲ್ಲಾ, ಹೀಗಾಗಿ ಕೊಪ್ಪಳ ಜಿಲ್ಲೆಯವರು ನಿಜವಾದ ಅಚ್ಚ ಕನ್ನಡಿಗರು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣೆಗೌಡ ಪಾಟೀಲ್ ಮಾತನಾಡಿ, ಕನ್ನಡ ಭಾಷೆಗೆ 200 ವರ್ಷಗಳ ಇತಿಹಾಸವಿದೆ, ಶಾಸ್ತ್ರೀಯ ಸ್ಥಾನ ಮಾನದ ಅನುಷ್ಠಾನಕ್ಕೆ ಜನಪ್ರತಿನಿದಿನಗಳು ಇನ್ನೂ ಹೆಚ್ಚು ಮುಂದಾಗಲಿ ಎಂದರು.
ಇದಕ್ಕೂ ಮುಂಚೆ ಸಕಲ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಆರ್ ಪಿ ರಾಜೂರ್ ಅವರ ಭವ್ಯ ಮೆರವಣಿಗೆ ನಡೆಯಿತು.
ಸಮ್ಮೇಳನದ ವೇದಿಕೆ ಕಾರ್ಯಕ್ರಮದಲ್ಲಿ ಅಭಿನವ ಪಂಚಾಕ್ಷರ ಸ್ವಾಮೀಜಿಗಳು,ಜಿಲ್ಲಾ ಕ ಸಾ ಪ ಅಧ್ಯಕ್ಷ ಶರಣೆಗೌಡ ಪಾಟೀಲ್, ಹಿರಿಯ ಸಾಹಿತಿ ಕೆ ಬಿ ಬ್ಯಾಳಿ, ವೀರಣ್ಣ ಅಣ್ಣಿಗೇರಿ, ತಾಲೂಕು ಕ ಸಾ ಪ ಅಧ್ಯಕ್ಷ ಕಳಕಪ್ಪ ಕುಂಬಾರ್, ಬಿ ವೀ ಶಿರೂರ್, ಕೇಂದ್ರ ಸಾಹಿತ್ಯ ಪರಿಷತ್ ಪ್ರತಿನಿಧಿ ನಬಿರ್ ಸಾಬ್ ಕುಷ್ಟಗಿ, ವೀರಣ್ಣ ನಿಂಗೊಜಿ, ಶರಣಪ್ಪ ಅಂಗಡಿ, ಮಹೇಶ್ ಸಬರದ್, ಬಸನಗೌಡ ತೊಂಡಿಹಾಳ್, ಸೇರಿದಂತೆ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಸ್ಥಳೀಯ ಜನಪ್ರತಿನಿದಿನಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ