Kushtagi : ಪಂಚಮುಖ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಮಾಡಿದ ರಾಜ್ಯಪಾಲರು

ಕುಷ್ಟಗಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡ  ಪಂಚಮುಖ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಮಾಡಿದ ಕರ್ನಾಟಕ ಸರ್ಕಾರದ ರಾಜ್ಯಪಾಲರು

ಕುಷ್ಟಗಿ :
ಸಾರ್ವಜನಿಕ ಕಲ್ಯಾಣಕ್ಕಾಗಿ ಮಾನವ ಜನ್ಮ ಉದ್ಧಾರಕ್ಕಾಗಿ ಶಾಶ್ವತ ಶಾಂತಿಯ ಪ್ರಚಾರಕ್ಕಾಗಿ ಸನಾತನ ಧರ್ಮಕ್ಕಾಗಿ ವಿಶ್ವ ಶಾಂತಿಗಾಗಿ ಶ್ರೀ ಮಹಾಂತ ಸಹದೇವಾನಂದ ಗಿರಿಜೀ ಯವರು ಯುಗಾದಿ ಹಬ್ಬದ ಶುಭದಿನದಂದು ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣ ಮಾಡಿದ್ದು ನಮ್ಮ ನಿಮ್ಮೆಲ್ಲರ ಸಂತೋಷದ ಸಂಗತಿ ಎಂದು ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹೋಲೆಟ್ ಅಭಿಪ್ರಾಯ ಪಟ್ಟರು ಕುಷ್ಟಗಿ ತಾಲೂಕಿನ ಮದಲಗಟ್ಟಿ ಸಮೀಪ ಇರುವ ಶ್ರೀ ಅಮರನಾಥೇಶ್ವರ ಮಹಾದೇವರ ಮಠ ನಾಗ  ಸಾಧು ಆಶ್ರಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು ನಾನು ಕೂಡ ಬಾಲ್ಯದಿಂದಲೂ ಆಂಜನೇಯ ಸ್ವಾಮಿ ಭಕ್ತನಾಗಿದ್ದು ಸುಮಾರು 50 ವರ್ಷಗಳಿಂದಲೂ  ಹನುಮಾನ್ ಚಾಲೀಸ್ ಓದುತ್ತಿದ್ದೇನೆ,‌ ಭಗವಂತನ ದರ್ಶನದಿಂದ ಸನ್ಮಾರ್ಗದಲ್ಲಿ ಭಕ್ತರು ನಡೆಯುತ್ತಾರೆ ಉಜ್ಜೇನಿಯಲ್ಲಿ  ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮಹಾಕಾಲ ಮಹಾ ಪರಿಸರವನ್ನು ನಿರ್ಮಾಣ ಮಾಡಲಾಗಿದೆ ಮೊದಲು ಲಕ್ಷ ಲಕ್ಷ  ಜನರು ಆ ಒಂದು ಪುಣ್ಯಭೂಮಿಗೆ ಆಗಮಿಸುತ್ತಿದ್ದು ಇಂದು ಅಲ್ಲಿ ಲಕ್ಷಕ್ಕಿಂತ  ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದು ಇದಕ್ಕೆ ಕಾರಣವೆಂದರೆ ಉಜ್ಜೇನಿಯಾ ಆ ಪುಣ್ಯ ಕ್ಷೇತ್ರದ  ಮಹತ್ವವು ಹೆಚ್ಚಾಗಿದೆ ಧರ್ಮ ಮತ್ತು ಆಧ್ಯಾತ್ಮಿಕ  ಕಾರ್ಯಕ್ರಮಗಳನ್ನು ಲೋಕ ಕಲ್ಯಾಣಕ್ಕಾಗಿ ಮಾಡುವುದರಿಂದ  ವರ್ಷ ವರ್ಷಕ್ಕೆ ಭಕ್ತರ ಸಂಖ್ಯೆ ಉಜ್ಜೇನಿಯಲ್ಲಿ  ಹೆಚ್ಚಾಗಿದೆ ಎಂದು ರಾಜ್ಯಪಾಲರು ಭಕ್ತಿಯ ನುಡಿಗಳನ್ನು ಹಂಚಿಕೊಂಡರು.
ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಹಾಗೂ ಕುಷ್ಟಗಿ ಕ್ಷೇತ್ರ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ ಹುನಗುಂದ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ್ ಮಾಜಿ ಶಾಸಕರು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಎಚ್ ಪಾಟೀಲ್ ಇನ್ನು ಅನೇಕರು ಮಾತನಾಡಿ ಯುಗಾದಿ ಪವಿತ್ರವಾದ ಹಿಂದೂ ಗಳ  ಹೊಸ ವರ್ಷದ ದಿನ ಇಂಥ ಒಂದು ದಿವಸದಂದು ಕುಷ್ಟಗಿ ತಾಲೂಕಿಗೆ ರಾಜ್ಯಪಾಲರು ಆಗಮಿಸಿದ್ದು  ಸೌಭಾಗ್ಯದಂತಾಗಿದೆ ಶ್ರೀ ಮಹಂತ ಸಹದೇವಾನಂದ ಗಿರಿಜೀ ಅವರ ಕೈಗೊಂಡ  ಈ ಪುಣ್ಯ ಕಾರ್ಯಕ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಮುಂಬರುವ ದಿನಗಳಲ್ಲಿ ಈ ಪವಿತ್ರ ಆಶ್ರಮವು  ಉತ್ತಮ ಅಭಿವೃದ್ಧಿಯಾಗಿ  ಈ ನಾಡಿನ ಸಕಲ ಸದ್ಭಕ್ತರಿಗೆ  ಪುಣ್ಯಕ್ಷೇತ್ರ ವಾಗಲಿ ಎಂದು ಶುಭ ನುಡಿಗಳನ್ನು ಹೇಳಿದರು 
 ಕಾರ್ಯಕ್ರಮಕ್ಕೆ ಮೊದಲು ಘನವೆತ್ತ ರಾಜ್ಯಪಾಲರನ್ನು ನೂರಾರು ಮಹಿಳೆಯರು ಕುಂಭ ಮೆರವಣಿಗೆ ವಾದ್ಯ ಮೇಳ ನುಡಿಸುತ್ತಾ  ವಿವಿಧ ಬಗೆಯ ಹೂಗಳಿಂದ ಹೂ ಮಳೆ ಸುರಿಸುತ್ತಾ   ಗೌರವಾನ್ವಿತವಾಗಿ ಆಶ್ರಮಕ್ಕೆ ಕರೆತರಲಾಯಿತು ಕಾರ್ಯಕ್ರಮಕ್ಕೂ ಮೊದಲು  ಪೂಜಾ  ಕಾರ್ಯಕ್ರಮಗಳು. ಮಂತ್ರ ಘೋಷಣೆ ಮಹಾ ರುದ್ರಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧ ಭಕ್ತಿಯಿಂದ ನೆರವೇರಿದವು.
ಈ ಒಂದು ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಂತ ಸಹದೇವಾನಂದ್ ಗಿರಿಜೀ ಪೀಠಾಧೀಶರೂ ಅಮರನಾಥೇಶ್ವರ ಮಹಾ ದೇವರ ಮಠ ನಾಗಸಾಧು ಆಶ್ರಮ ಕುಷ್ಟಗಿ ಇವರು ವಹಿಸಿಕೊಂಡಿದ್ದರು ಆನಂದ ವಿಭೋಷಿತ ಮಹಾ ಮಂಡಲೇಶ್ವರ ಶ್ರೀ ಶ್ರೀ 1008 ದೇವಾನಂದ್ ಗಿರಿ ಮಹಾರಾಜ್ ಋಷಿಕೇಶ ಉತ್ತರಕಾಂಡ ಅಷ್ಟ ಕುಶಾಲ ಮಹಾಂತ ರಾಹುಲ್ ಗಿರಿ ಮಹಾರಾಜ್ ಕಾಶಿ ವಾರಣಾಸಿ ಶ್ರೀ ಮಹಾಂತ ಗಣಪತಿ ಗೋಚಿಂದಗಿರಿ ಮಹಾರಾಜ್ ರಾಜಸ್ಥಾನ ಸಾಧ್ವಿ ಶ್ರೀ ಮಹಾಂತ ಲಕ್ಷ್ಮಿ ಪುರಿ ಮಾತಾಜಿ ಬೃಂದಾವನ ಇನ್ನು ಅನೇಕ ನಾಗಸಾಧುಗಳು ಕುಷ್ಟಗಿ ಪುರಸಭಾ ಅಧ್ಯಕ್ಷರಾದ ಜಿ ಕೆ ಹಿರೇಮಠ್ ಹಿರಿಯ ಪ್ರಮುಖರಾದ ದೇವೇಂದ್ರಪ್ಪ  ಬೋಳಟಗಿ ಬಿಜೆಪಿ ತಾಲೂಕ ಅಧ್ಯಕ್ಷರಾದ  ಬಸವರಾಜ್ ಹಳ್ಳೂರು   ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ ಮಹೇಶ್  ರಾಜುಗೌಡ ಪಾಟೀಲ್ ಉಮೇಶ್ ಯಾದವ    ಆಶ್ರಮದ. ಪರಮ ಭಕ್ತರಾದ ಪರಶುರಾಮ್ ಇಳಿಗೆರ್  ಬಸವರಾಜ್ ಕಡಿವಾಲ ದೊಡ್ಡಬಸು ಸುಂಕದ  ಪ್ರಕಾಶ್ ಪಟ್ಟಿದ್ ರವಿಕುಮಾರ್ ಕಟ್ಟಿಮನಿ ಇನ್ನೂ ಅನೇಕ ಸಂಘಟಕರು  ಭಾಗವಹಿಸಿದ್ದರು ಬಂದಂತ ಭಕ್ತಾದಿಗಳಿಗೆ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು ಇದೆ ಸಂದರ್ಭದಲ್ಲಿ ಹೊಸದಾಗಿ ನಿರ್ಮಾಣ ಮಾಡಲು  ಅಮರನಾಥೇಶ್ವರ ಶಿವಾಲಯ ದೇವಸ್ಥಾನಕ್ಕೆ ರಾಜ್ಯಪಾಲರು ಗುದ್ದಲಿ ಪೂಜೆ  ಮಾಡಿದರು ವೇದಿಕೆಯ ಮುಂಬಾಗದಲ್ಲಿ ಕುಂತಂತ ನಾಗ ಸಾಧುಗಳಿಗೆ ತಮ್ಮ ಭಕ್ತಿಯ ನಮನಗಳನ್ನು ಸಲ್ಲಿಸಿದರು.

 ಮಲ್ಲಿಕಾರ್ಜುನ್ ದೋಟಿಹಾಳ ವರದಿಗಾರರು ಕುಷ್ಟಗಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">