Hubballi-ಒಳಮೀಸಲಾತಿಯ ದಶಕಗಳ ಬೇಡಿಕೆಯನ್ನು ಈಡೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ

ಒಳಮೀಸಲಾತಿಯ ದಶಕಗಳ ಬೇಡಿಕೆಯನ್ನು ಈಡೇರಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ. ಧರಣಿಸ್ಥಳಕ್ಕೆ ಆಗಮಿಸಿ ಜಗದೀಶ ಶೆಟ್ಟರ್ ಅವರಿಂದ ಹೋರಾಟಗಾರರಿಗೆ ಸನ್ಮಾನ, ಧರಣಿ ಸುಖಾಂತ್ಯ.
ಶತಮಾನಗಳಿಂದ ಅಸ್ಪ್ರಶ್ಯತೆಯಲ್ಲಿ ಬೆಂದ ಅತ್ಯಂತ ಶೋಷಿತರು, ಅತ್ಯಂತ ತುಳಿತಕ್ಕೊಳಗಾದ ಮೂಲ ಪರಿಶಿಷ್ಟರಾದ ಮಾದಿಗ, ಛಲವಾದಿ, ಸಮಗಾರ, ಡೋಹರ ಮತ್ತು ಮೋಚಿಗಾರ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದನ್ನು ಮನಗಂಡು ಮತ್ತು ಸುಮಾರು ಮೂರು ದಶಕಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟವನ್ನು ಮನ್ನಿಸಿ ಬಿಜೆಪಿ ಆಡಳಿತದ ಕರ್ನಾಟಕ ಸರಕಾರ ಈ ಮುಂಚೆ ನೀಡಿದ ಭರವಸೆಯಂತೆಯೇ ಕೊನೆಗೂ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿಗೆ ತಂದಿರುವುದನ್ನು ಹುಬ್ಬಳ್ಳಿಯ ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟದ ವತಿಯಿಂದ ಪಟಾಕಿ ಸಿಡಿಸಿ, ಹರ್ಷೋದ್ಗಾರದೊಂದಿಗೆ ವಿಜಯೋತ್ಸವವನ್ನು ಆಚರಿಸುತ್ತ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಧರಣಿ ವೇದಿಕೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ ಶೆಟ್ಟರ ಅವರು ಎಲ್ಲ ಹೋರಾಟಗಾರರಿಗೆ ಹೂಮಾಲೆಯೊಂದಿಗೆ ಸನ್ಮಾನಿಸಿ ಬಿಜೆಪಿ ಸರ್ಕಾರ ಯಾವತ್ತೂ ದಲಿತರ ಪರವಾಗಿದೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ, ತಮ್ಮೆಲ್ಲರ ಒಗ್ಗಟ್ಟು ಮತ್ತು ಶಿಸ್ತಿನಿಂದ ಕೂಡಿದ ಹೋರಾಟ ಇಂದು ನಿಮಗೆ ಜಯವನ್ನು ತಂದುಕೊಟ್ಟಿದೆ ಎಂದು ಮಾರ್ನುಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಶ್ರೀ ಮಂಜುನಾಥ ಕೊಂಡಪಲ್ಲಿ ಅವರು “ಇಂದು ನಮ್ಮ ಮೂಲ ಅಸ್ಪೃಶ್ಯ ಸಮುದಾಯಗಳಿಗೆ ನಿಜವಾದ ಸಾಮಾಜಿಕ ನ್ಯಾಯ ದೊರೆತಿದೆ, ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರ ಸರಕಾರ ನಿಜವಾಗಿಯೂ ನುಡಿದಂತೆ ನಡೆವ ಸರಕಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಐತಿಹಾಸಿಕ ನಿರ್ಣಯದಿಂದ ಬಿಜೆಪಿ ಆಡಳಿತಾರೂಢ ಸರಕಾರ ನಮ್ಮ ಹೃದಯಗಳಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ ಮತ್ತು ಈ ಯಶಸ್ಸಿನ ಶ್ರೇಯಸ್ಸು ತೆರೆಮರೆಯಲ್ಲಿ ತಮ್ಮ ನಿರಂತರ ಪ್ರಯತ್ನದಿಂದ ಸಾಧಿಸಿದ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ಮತ್ತು ಕಳೆದ ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ಮುನ್ನಡೆಸಿಕೊಂಡು ಬಂದಿರುವ ಇತರ ಹಿರಿಯ ಹೋರಾಟಗಾರರ ತ್ಯಾಗ, ಪರಿಶ್ರಮಕ್ಕೆ ಸಲ್ಲುತ್ತದೆ ಎಂದರು. ಒಳಮೀಸಲಾತಿಗಾಗಿ ನಿರಂತರ ಪರಿಶ್ರಮ ಪಟ್ಟ ಸಂಸದ ಶ್ರೀ ಎ ನಾರಾಯಣಸ್ವಾಮಿ, ಸಚಿವ ಶ್ರೀ ಗೋವಿಂದ ಕಾರಜೋಳ ಮತ್ತು ಸಂಘ ಪರಿವಾರದ ಎಲ್ಲ ಪ್ರಮುಖರಿಗೆ ನಮ್ಮ ಸಮುದಾಯದ ವತಿಯಿಂದ ಶತಕೋಟಿ ವಂದನೆಗಳನ್ನು ಸಲ್ಲಿಸುತ್ತೇವೆ 

ವೇದಿಕೆಯಲ್ಲಿ ಸೂರ್ಯನಾರಾಯಣ ಕನಮಕ್ಕಲ, ನಾಗೇಶ ಕತ್ರಿಮಲ, ಪರಶುರಾಮ ಮಲ್ಯಾಳ, ಶಂಕರ ಅಜಮನಿ, ಲೋಕಮಾನ್ಯ ರಾಮದತ್ತ, ರಂಗನಾಯಕ ತಪ್ಪೇಲಾ, ಮೇಘರಾಜ ಹಿರೇಮನಿ, ಗುರುಮೂರ್ತಿ ಬೆಂಗಳೂರು, ಶ್ರೀನಿವಾಸ ರಟ್ಟಿ, ದುರ್ಗಪ್ಪ ಪೂಜಾರಿ, ಬಸಂತಕುಮಾರ ಅನಂತಪುರ, ಸೋಮಣ್ಣ ಹಂಜಗಿ, ನಾಗಾರ್ಜುನ ಕತ್ರಿಮಾಲ, ಯಮುನಪ್ಪ ಒಂಕರಾಜ, ಗೋವಿಂದ ಬೆಲ್ಡೋಣಿ, ಗೋವಿಂದ ಬಂಡಮೀದಪಲ್ಲಿ, ಸಿ ವಿ ಸ್ವಾಮಿ, ಸತ್ಯನಾರಾಯಣ ಎಂ, ಹನುಮಂತ ಸೋಮನಪಲ್ಲಿ, ಹನುಮಂತ ಹೂವನೂರ್, ಗಂಗಾಧರ ಪೆರೂರ, ವೆಂಕಟೇಶ ಅರಪನಾಳ ಒಳಗೊಂಡಂತೆ ಇತರ ಹಲವಾರು ಹೋರಾಟಗಾರರು ಉಪಸ್ಥಿಥರಿದ್ದರು.

ವರದಿ : ಬಸವರಾಜ ಕಬಡ್ಡಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">