KR Pete - ನಾರಾಯಣಗೌಡ್ರು 10 ವರ್ಷಗಳ ಕಾಲ ಬಸವ ಜಯಂತಿ ಮಾಡಲಿಲ್ಲ : ವಿ.ಎಸ್ ಧನಂಜಯ್

ಜೆ ಡಿ ಎಸ್ ಪಕ್ಷದ ವರಿಷ್ಠರು ಒಪ್ಪಿಗೆ ನೀಡುದ್ರೆ  ಸಚಿವರಾದ ಕೆ ಸಿ ನಾರಾಯಣಗೌಡ್ರು ವಿರುದ್ದ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸುವುದಾಗಿ  ವೀರಶೈವ ಅಖಿತ ಕರ್ನಾಟಕ ಮಾಹಾ ಸಭಾ ತಾಲ್ಲೂಕು ಅದ್ಯಕ್ಷ ವಿ.ಎಸ್ ಧನಂಜಯ್ ಕುಮಾರ್ ತಿಳಿಸಿದ್ರು.
ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ನೆಡೆದ ಮನೆ ಮನೆಗೆ ಪಂಚರತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ 95% ವೀರಶೈವ ಸಮಾಜದ ಜನತೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ರವರನ್ನು ನೋಡಿ ಕೆ ಸಿ ನಾರಾಯಣಗೌಡರಿಗೆ ಮತ ನೀಡಿದ್ದೇವೆ ಆದ್ರೆ ನಾರಾಯಣಗೌಡ್ರು 10 ವರ್ಷಗಳ ಕಾಲ ಬಸವ ಜಯಂತಿ ಮಾಡಲಿಲ್ಲ ಅಲ್ಲದೆ ಬಸವಣ್ಣನವರ ಭವನ ನಿರ್ಮಾಣ ಮಾಡುಲು ಅನುದಾನ ನೀಡುತ್ತೇನೆ ಎಂದು  ಬರಿ ಸುಳ್ಳು ಭರವಸೆಯನ್ನೇ ಹೇಳಿಕೊಂಡು ತಮ್ಮ ಅಧಿಕಾರದ ಅವದಿಯನ್ನು ಮುಗಿಸಿದ್ದಾರೆ ಅಲ್ಲದೆ ನಮ್ಮ ಜೆ ಡಿ ಎಸ್ ಪಕ್ಷದ ನಾಯಕರು  ರೌಡಿ, ಪರೋಡಿಗಳು  ಎಂದು ಟೀಕೆ ಮಾಡಿದ್ದು, ಅಧಿಕಾರದ ಆಸೆಗೆ ಬಿದ್ದು  ಪಕ್ಷದಿಂದ ಪಕ್ಷಕ್ಕೆ ಜಿಗಿದು ಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದ್ರು.
ಅಲ್ಲದೆ  ಸಚಿವ ನಾರಾಣಗೌಡ್ರು ತಾಲ್ಲೂಕಿನ ಶೀಳನೆರೆ ಹೋಬಳಿಯಲ್ಲಿ ಪ್ರಾಣಿಗಳ ವಿವಾಹರಕ್ಕೆ ಮೀಸಲಿರುವ  47 ಎಕ್ಕರೆ ಭೂಮಿಯನ್ನು 990 ವರ್ಷ ಭೋಗ್ಯಕ್ಕೆ ಪಡೆದಿರುವುದು ಯಾರಿಗೂ ಗೊತ್ತಿಲ್ಲ ಎಂದು ತಿಳಿದಿದ್ದಾರೆ . ನಮ್ಮ ಸಂವಿಧಾನದಲ್ಲಿ  ಯಾರು ಸಹ ಬೋಗ್ಯಕ್ಕೆ 990 ವರ್ಷಗಳ ಕಾಲ ಭೂಮಿ ಭೋಗ್ಯಕ್ಕೆ ಪಡೆದಿಲ್ಲ ಇವರು ಈ ಕೆಲಸ ಮಾಡಿದ್ದಾರೆ ಇದರ ಧಾಖಲೆಗಳು ನನ್ನ ಬಳಿ ಇದೆ ನಮ್ಮ ಜೆ ಡಿ ಎಸ್ ಪಕ್ಷದ ವರಿಷ್ಠರು ಒಪ್ಪಿಗೆ ಕೊಟ್ಟರೆ ಇವರ ವಿರುದ್ದ  ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದು ವೀರಶೈವ ಸಂಘದ ತಾಲ್ಲೂಕು ಅದ್ಯಕ್ಷ ಧನಂಜಯ ಎಚ್ಚರಿಗೆ ನೀಡಿದ್ರು*

ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಹೆಚ್ ಟಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್,  ತಾಲ್ಲೂಕು ಜೆ.ಡಿ.ಎಸ್ ಘಟಕದ ಅದ್ಯಕ್ಷ ಜಾನಕಿರಾಮು, ಜೆ ಡಿ ಎಸ್  ರಾಜ್ಯ ಮಾದ್ಯಮ ವಕ್ತಾರರಾದ ಅಶ್ವಿನ್ ಕುಮಾದ್,  ಕಿಕ್ಕೇರಿ ಹೋಬಳಿ ಘಟಕದ ಅದ್ಯಕ್ಷ ಕಾಯಿ ಮಂಜೇಗೌಡ, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಐಕನಹಳ್ಳಿ ಕೃಷ್ಣೇಗೌಡ್ರು, ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ವೆಂಕಟೇಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅದ್ಯಕ್ಷ ಕೆ ಬಿ ಶೇಖರ್, ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ ಶಂಭು‌ ಕಿಕ್ಕೇರಿ ಕೃಷ್ಣರಾಜಪೇಟೆ
Previous Post Next Post

Contact Form

f="https://unpkg.com/video.js/dist/video-js.css" rel="stylesheet">