Kushtagi : ಅಡವಿಬಾವಿ ಗ್ರಾಮದಲ್ಲಿ ಏಡ್ಸ್ ಜನ ಜಾಗೃತಿ ಕಾರ್ಯಕ್ರಮ ಯಶಸ್ವಿ

ಕುಷ್ಟಗಿ ತಾಲೂಕು ಅಡವಿಬಾವಿ ಗ್ರಾಮದಲ್ಲಿ ಏಡ್ಸ್ ಜನ  ಜಾಗೃತಿ ಕಾರ್ಯಕ್ರಮ ಯಶಸ್ವಿ
ಕುಷ್ಟಗಿ
 ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜನಪದ ಕಲಾ ತಂಡದ ಮೂಲಕ ಏಡ್ಸ್ ಜನ ಜಾಗೃತಿ ಕಾರ್ಯಕ್ರಮವನ್ನು ತಾಲೂಕಿನ ಅಡವಿಭಾವಿ  ಗ್ರಾಮದ    ಶ್ರೀ ಮಾರುತೇಶ್ವರ  ದೇವಸ್ಥಾನದ ಆವರಣದಲ್ಲಿ ಶನಿವಾರ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಏಡ್ಸ್ ಅಂತ್ಯಗೊಳಿಸಿ ಅಸಮಾನತೆಗಳನ್ನು ಕೊನೆಗಾಣಿಸಲು, ಪ್ರತಿಯೊಬ್ಬರ ಆರೋಗ್ಯವನ್ನು ಕಾಪಾಡಲು ಮತ್ತು ಪ್ರತಿಯೊಬ್ಬರನ್ನು ಖುಷಿಯಾಗಿ ಇಡಲು ವಿಶ್ವ ಒಂದಾಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜ್ ಜಕ್ಕಮ್ಮನವರ್  ಸಾರ್ವಜನಿಕರಿಗೆ ಜಾನಪದ ಗೀತೆ ಹಾಡುವ ಮೂಲಕ  ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಜೈ ಭೀಮ್ ಗೀ. ಗೀ. ಜಾನಪದ ಕಲಾತಂಡ ನೀಲಗುಂದ ಇವರು ವಿವಿಧ ಜಾನಪದ ಗೀತೆಗಳ  ಹಾಡುವ ಮೂಲಕ ಪ್ರಸ್ತುತಪಡಿಸಿದರು ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಗಪ್ಪ ಮಲ್ಕಾಪುರ್ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಪರಸಪ್ಪ ಕುಮಟಗಿ ಮಲ್ಲನಗೌಡ ಪೊಲೀಸ್ ಪಾಟೀಲ್ ಹನುಮಗೌಡ ಮಾಲಿ ಪಾಟೀಲ್ ಹನುಮಪ್ಪ ತೋಪಲಕಟ್ಟಿ ಕನಕಪ್ಪ ಉಪನಾಳ ಗುರುಬಸಪ್ಪ ಶಾಡ್ಲಿಗೇರಿ ಯಲ್ಲಪ್ಪ ಹನುಮಸಾಗರ ಲಕ್ಷ್ಮಪ್ಪ ಉಪನಾಳ ಹಾಗೂ ಆಶಾ ಕಾರ್ಯಕರ್ತೆಯರಾದ ಮಂಜುಳಾ  ಎಂ ದೋಟಿಹಾಳ್ ಶರಣಮ್ಮ ಎಂ ವೈಜಾಪುರ್ ಅಂಗನವಾಡಿ ಕಾರ್ಯಕರ್ತೆಯಾದ  ಮಹಾಂತಮ್ಮ ಶಾಡ್ಲಿಗೇರಿ ಮತ್ತು ಕಲಾತಂಡದ ಪ್ರಮುಖರಾದ  ಗೋಪಿ ಕಾಳಿ ನಿಂಗಪ್ಪ ಕಾಳಿ ಲಿಂಗರಾಜ್ ಕಾಳಿ ಗ್ರಾಮದ ಗುರು ಹಿರಿಯರು ಮತ್ತು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 ವರದಿ : ಮಲ್ಲಿಕಾರ್ಜುನ ದೋಟಿಹಾಳ  
Previous Post Next Post

Contact Form

f="https://unpkg.com/video.js/dist/video-js.css" rel="stylesheet">