ಕುಷ್ಟಗಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ವಿಶೇಷಚೇತನರಿಂದ ಮತದಾನ ಜಾಗೃತಿ
ಬ್ಯಾಲಿಹಾಳ ಗ್ರಾಮದಲ್ಲಿ ಜರುಗಿದ ಸ್ವೀಪ್ ಕಾರ್ಯಕ್ರಮ
ಕುಷ್ಟಗಿ : ಬರುವ ವಿಧಾನಸಭಾ ಚಿನಾವಣೆಯಲ್ಲಿ ಪ್ರತಿಯೊಬ್ಬ ವಿಶೇಷಚೇತನರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕುಷ್ಟಗಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರಾದ ಶಿವಪ್ಪ ಸುಬೇದಾರ್ ಕರೆ ನೀಡಿದರು.
ದಿನಾಂಕ:06-03-2023ರಂದು ಕೊರಡಕೇರಾ ಗ್ರಾಮ ಪಂಚಾಯತಿಯ ಬ್ಯಾಲಿಹಾಳ* ಗ್ರಾಮದಲ್ಲಿ ತಾಲೂಕಿನ ಗ್ರಾ.ಪಂ ವಿಶೇಷಚೇತನ ಕಾರ್ಯಕರ್ತರು ಹಾಗು ವಿಶೇಷಚೇತನರಿಗೆ EVM, VVPAT ಬಳಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 18 ವರ್ಷ ಮೇಲ್ಪಟ್ಟ ವಿಶೇಷಚೇತನರು ಮತದಾನದಿಂದ ಹೊರಗುಳಿಯದಂತೆ ಕ್ರಮವಹಿಸಬೇಕೆಂದು ಗ್ರಾಮ ಪಂಚಾಯತಿಯ ವಿಶೇಷಚೇತನರಿಗೆ ಸೂಚಿಸಿದರು.
ನಂತರ EVM,VVPAT ಬಳಕೆ ಕುರಿತು ಮಾಸ್ಟರ್ ಟ್ರೈನರ್ ಶರಣಪ್ಪ ತೆಮ್ಮಿನಾಳ ಎಲ್ಲಾ ವಿಶೇಷಚೇತನರಿಗೆ ಅಣಕು ಮತದಾನ ಮೂಲಕ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಟ್ರೈಸಿಕಲ್ ಮೂಲಕ ಜಾಥಾ ನಡೆಯಿತು. ನಂತರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 61 ವಿಶೇಷಚೇತನರು ಅಣುಕು ಮತದಾನ ಮಾಡಿದರು.
ಸದರಿ ಕಾರ್ಯಕ್ರಮದಲ್ಲಿ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಹನಮಗೌಡ, ತಾಲೂಕಿನ ಎಲ್ಲಾ ಗ್ರಾ.ಪಂ ವಿಶೇಷಚೇತನರ ಕಾರ್ಯಕರ್ತರು ಹಾಗು ವಿಶೇಷಚೇತನರು, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.
ಮಲ್ಲಿಕಾರ್ಜುನ ದೋಟಿಹಾಳ ವರದಿಗಾರರು ಕುಷ್ಟಗಿ