Sindhanuru : ಪ್ರಾಣಿ ಪಕ್ಷಿಗಳ ಸಂತತಿ ಉಳಿವಿಗಾಗಿ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ... ಸೋಮನಾಥ ಶಿವಾಚಾರ್ಯ

ಸಿಂಧನೂರು
ಪ್ರಾಣಿ ಪಕ್ಷಿಗಳ ಸಂತತಿ ಉಳಿವಿಗಾಗಿ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ... ಸೋಮನಾಥ ಶಿವಾಚಾರ್ಯ
ಸಿಂಧನೂರು ತಾಲೂಕಿನ ಬಾಳೆಹೊನ್ನೂರು ಶಾಖಾ ಮಠ ಕರಿಬಸವನಗರದಲ್ಲಿ ವನಸಿರಿ ಫೌಂಡೇಶನ್(ರಿ).ರಾಯಚೂರು  ರಾಜ್ಯ ಘಟಕದ ವತಿಯಿಂದ ಬೇಸಿಗೆ ಕಾಲದ ನಿಮಿತ್ತವಾಗಿ ಪಕ್ಷಿಗಳಿಗೆ ಕಾಳು ಕಡಿಗಳು ಹಾಗೂ ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಾಗೂ ಎಪ್ರೀಲ್ ಪೂಲ್ ಬದಲಿಗೆ ಎಪ್ರೀಲ್ ಕೂಲ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅರವಟ್ಟಿಗೆ ತಯಾರಿಸುವ ಕುರಿತು ಹಾಗೂ ಕಾರ್ಯಕ್ರಮದ ರೂಪುರೇಷಗಳ ಪೂರ್ವಭಾವಿ ಸಭೆ ನಡೆಯಿತು.
 ಈ ಪೂರ್ವಭಾವಿ ಸಭೆ ಪರಮ ಪೂಜ್ಯ ಷ.ಬ್ರ.ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು,ಪರಮ ಪೂಜ್ಯ ಷ.ಬ್ರ.ಶ್ರೀ ಚನ್ನಬಸವ ಶಿವಾಚಾರ್ಯ ಕೆಂಬಾವಿ ಮಠ ಹಾಗೂ ಪರಮ ಪೂಜ್ಯ ಶ್ರೀ ಅಮರಗುಂಡಯ್ಯ ಮಹಾಸ್ವಾಮಿಗಳ ಪುರವರ ಹಿರೇಮಠ ತುರವಿಹಾಳ ನೇತ್ರತ್ವ ವಹಿಸಿ ಅರವಟ್ಟಿಗೆಗೆ ಕಾಳು ಕಡಿಗಳು ಹಾಗೂ ನೀರು ಹಾಕುವ ಮೂಲಕ ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಳೆಹೊನ್ನೂರು ಶಾಖಾ ಮಠದ ಪ.ಪೂ.ಷ.ಬ್ರ.ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ವನಸಿರಿ ಫೌಂಡೇಶನ್ ಗೆಳೆಯರ ಬಳಗದ ವತಿಯಿಂದ ಪಕ್ಷಿಗಳಿಗೆ ಕುಡಿಯುವ ನೀರಿನ ಅರವಟ್ಟಿಗೆಯನ್ನ ಪ್ರಾರಂಭಿಸುತ್ತಿದ್ದಾರೆ.ತಮಗೆಲ್ಲ ತಿಳಿದಹಾಗೆ ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಬೇಸಿಗೆ ದಿನಗಳಲ್ಲಿ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರೆ ನೀರಿನ ಅರವಟ್ಟಿಗೆ ನಿರ್ಮಾಣ ಮಾಡಿ ಇಡುವುದು ಜೊತೆಗೆ ಕಾಳುಕಡಿಗಳನ್ನ ಇಡುವಂತಹುದು ಮುಖ್ಯ ಇಂತಹ ಒಂದು ಸತ್ಕಾರ್ಯವನ್ನು ಪ್ರತಿವರ್ಷ ಬೇಸಿಗೆಯಲ್ಲಿ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಮತ್ತು ಅವರ ಗೆಳೆಯರ ಬಳಗದವರು ಮಾಡಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದೆ ಸಾರ್ವಜನಿಕರು ಪರಿಸರ ಪ್ರೇಮಿಗಳು ತನು ಮನ ಧನದಿಂದ ಸಹಕಾರ ನೀಡಬೇಕು ಆಗ ಮಾತ್ರ ನಮ್ಮ ದೇಶದಲ್ಲಿ ಪ್ರಾಣಿ ಪಕ್ಷಿಗಳ ಸಂತತಿ ಉಳಿಯಲು ಸಾದ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ : ಶರಣೇಗೌಡ ಹೇಡಿಗಿನಾಳ ರಾಜ್ಯ ಕಾರ್ಯದರ್ಶಿ, ಚಂದ್ರು ಪವಾಡಶಟ್ಟಿ,ಗಿರಿಸ್ವಾಮಿ ಹೇಡಿಗಿನಾಳ, ವೆಂಕಟರಡ್ಡಿ ಹೇಡಿಗಿನಾಳ,ರಾಜು ಪತ್ತಾರ್ ಬಳಗಾನೂರ, ಪ್ರದೀಪ್ ಕನ್ನಾರಿ, ವೀರಭದ್ರಯ್ಯಸ್ವಾಮಿ ತಿಮ್ಮಾಪೂರ,ಚನ್ನಪ್ಪ ಕೆ.ಹೊಸಹಳ್ಳಿ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಭಾಗಿಯಾಗಿದ್ದರು.

ವರದಿ : ಮೆಹಬೂಬ್ ಮೋಮಿನ

Previous Post Next Post

Contact Form

f="https://unpkg.com/video.js/dist/video-js.css" rel="stylesheet">