ಗ್ರಾಮ ಪಂಚಾಯತ್ ಸದಸ್ಯರೋರ್ವರು ಆತ್ಮಹತ್ಯೆ -Mangaluru

ಮಂಗಳೂರು: ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
ಮೃತರನ್ನು ಸಂದೀಪ್ ಶೆಟ್ಟಿ ಮೊಗರು(35) ಎಂದು ಗುರುತಿಸಲಾಗಿದೆ.

ಗಂಜಿಮಠ ಗ್ರಾಮ ಪಂಚಾಯತ್ ನ ಮೊಗರು 9ಮತ್ತು 10 ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಸಂದೀಪ್ ಶೆಟ್ಟಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗದಲ್ಲಿರುವ ತನ್ನ ಕಟೀಲೇಶ್ವರಿ ಸೇವಾ ಸಿಂದು ಕಚೇರಿಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬುಧವಾರ ಮಧ್ಯಾಹ್ನದಿಂದ ಸಂದೀಪ್ ಕಾಣೆಯಾಗಿದ್ದು, ಹುಡುಕಾಟ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಸೇವಾ ಸಿಂದು ಕೇಂದ್ರ ನಡೆಸುತ್ತಿದ್ದ, ಅವಿವಾಹಿತ ಸಂದೀಪ್ ಶೆಟ್ಟಿ ಇನ್ಶೂರೆನ್ಸ್ ಏಜೆಂಟರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ವ್ಯಾವಹಾರಿಕ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವೆನ್ನಲಾಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ

Previous Post Next Post

Contact Form

f="https://unpkg.com/video.js/dist/video-js.css" rel="stylesheet">