ಪಾವಗಡ:- ನೀರು ಅಮೂಲ್ಯವಾದ ಜೀವ ಜಲ ಆದ್ದರಿಂದ ಪ್ರತಿಯೊಬ್ಬರೂ ಮಿತವಾಗಿ ಬಳಸುವುದರ ಮೂಲಕ ಸಂರಕ್ಷಣೆ ಮಾಡಬೇಕು ಎಂದು ಶಾಸಕರಾದ ವೆಂಕಟರಮಣಪ್ಪನವರು ತಿಳಿಸಿದರು.
ತಾಲ್ಲೂಕಿನ ರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಗುರುವಾರ 'ಜಲಜೀವ ನಿಯೋಜನೆ' ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪಂಚಾಯತ್ ಸಭಾಂಗಣವನ್ನು ಲೋಕಾರ್ಪಣೆ ಮಾಡಿ ನಂತರ ಅವರು ಮಾತನಾಡುತ್ತಾ, ಜೀವನ ವ್ಯವಸ್ಥೆ ನಿಂತಿರುವುದೇ ನೀರಿನ ಆಧಾರದ ಮೇಲೆ. ಆದ್ದರಿಂದ ಪ್ರತಿಯೊಂದು ಗ್ರಾಮದಲ್ಲಿ ಸಹ ಮನೆಮನೆಗೂ ನೀರು ನೀಡುವ ಯೋಜನೆ ಅಡಿಯಲ್ಲಿ ಇಂದು ರೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹುಲಿ ಬೆಟ್ಟ ತಂಡಕ್ಕೆ 15.50 ಲಕ್ಷ, ದಿನ್ನೆ ಬಾಯಿ ತಂಡಕ್ಕೆ 7.20 ಲಕ್ಷ, ಗೊರಸಮಾವು ಗ್ರಾಮಕ್ಕೆ 17.40 ಲಕ್ಷ ನಡೆದಿಗ ಬಂಡೆ ಗ್ರಾಮಕ್ಕೆ 17.40 ಲಕ್ಷ ಟಿ ಎನ್ ಪೇಟೆ ಗ್ರಾಮಕ್ಕೆ 28.20 ಲಕ್ಷ, ಬೊಮ್ಮತನಹಳ್ಳಿ ಗ್ರಾಮಕ್ಕೆ 85.70 ಲಕ್ಷ, ರೊಪ್ಪ ಹಾಗೂ ರೊಪ್ಪ ತಾಂಡಕ್ಕೆ ಸೇರಿ ಒಟ್ಟು 266.40 ಲಕ್ಷ ನೀಡಲಾಗಿದೆ. ನೀರು ಮಾನವನ ಪಾಲಿನ ಜೀವ ಜಲ. ನಿಸರ್ಗ ನೀಡಿರುವ ನೀರನ್ನು ನಾವು ಸದುಪಯೋಗ ಮಾಡಬೇಕೇ ಹೊರತು, ದುರುಪಯೋಗ ಮಾಡಿಕೊಳ್ಳಬಾರದು.
ಗ್ರಾಮೀಣ ಪ್ರದೇಶಗಳಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸುವಾಗ ಮೊದಲು ಚರಂಡಿ ವ್ಯವಸ್ಥೆ ಮಾಡಿ ಇಲ್ಲದಿದ್ದರೆ ರಸ್ತೆಯ ಮಧ್ಯ ಭಾಗದಲ್ಲಿ ಕೊಳಚೆ ನೀರು ಹರಿಯುತ್ತದೆ. ಈ ನೀರನ್ನು ದಾರಿಯಲಿ ಹಾದು ಹೋಗುವರು ಪ ತುಳಿದುಕೊಂಡು ಹೋಗಬೇಕಾಗುತ್ತದೆ.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವರಾಜಯ್ಯ, ಸಹಾಯಕ ಕಾರ್ಯ ಪಾಲಕ ಅಭಿಯಂತರಾದ ಸುರೇಶ್, ಹನುಮಂತರಾಯಪ್ಪ, ಸಹಾಯಕ ನಿರ್ದೇಶಕರಾದ ರಂಗನಾಥ್, ಮಲ್ಲಿಕಾರ್ಜುನಪ್ಪ , ಶಿವಪ್ಪ , ಕೊಂಡಪ್ಪ ಇನ್ನೂ ಅನೇಕರು ಉಪಸ್ಥಿತರಿದ್ದರು...
Tags
ರಾಜಕೀಯ