ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಾಬುಸಾಬ್ ಲಕ್ಷ್ಮೇಶ್ವರ ಅವರು ಈಗಿನ ಸರ್ಕಾರ ಭ್ರಷ್ಟಾಚಾರದಲ್ಲಿ ತಲ್ಲಿನವಾಗಿದೆ. 40% ತೆಗೆದುಕೊಳ್ಳುವುದು ಅವರ ದೊಡ್ಡ ಸಾಧನೆಯಾಗಿದೆ. ಈ ಭ್ರಷ್ಟ ಬಿಜೆಪಿ ಸರಕಾರದ ಭ್ರಷ್ಟಾಚಾರಕ್ಕೆ ಸಾರ್ವಜನಿಕರು ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಮೂಲ ಬೆಲೆ ಗಗನಕ್ಕೇರಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆ ಒಡೆತಿಗೆ ಪ್ರತಿ ತಿಂಗಳು 2000 ರೂಪಾಯಿಗಳು, 10 ಕೆಜಿ ಅಕ್ಕಿ ಫ್ರೀ ಜೊತೆಗೆ ವಿದ್ಯಾವಂತ ಪದವೀಧರ ನಿರುದ್ಯೋಗಿ ಯುವಕರಿಗೆ 2,000 ರೂಪಾಯಿಗಳನ್ನ ಹಾಗೂ ಡಿಪ್ಲೋಮಾ ಪದವಿದರಿಗೆ 1500 ರೂಪಾಯಿಗಳನ್ನು ಪ್ರತಿ ತಿಂಗಳು ಎರಡು ವರ್ಷದವರೆಗೆ ವಿತರಿಸಲಾಗುವುದು ಎಂದರು. ನಮ್ಮದು ನುಡಿದಂತೆ ನಡೆಯುವ ಸರಕಾರ.
ಈ ಹಿಂದೆಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನ ಈಡೇರಿಸಿದ್ದೇವೆ. ಆದ್ದರಿಂದ ಮುಂಬರುವ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ವಿಜಯನಗರ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರಮೇಶ್ ಗುಡಿಮನಿ, ಗುಡುಸಾಬ ಚೋರಗಸ್ತಿ, ಪಕ್ರು ಸಾಬ್ ಕಳ್ಳಿಮನಿ, ರಫೀಕ ಟಕ್ಕೇದ,ಗೌಸುಸಾಬ್ ಕೊಲ್ಕರ್, ಬಸವರಾಜ್ ಬಂತಿ, ಉಮೇಶ್ ಚಿಕ್ಕತೋಟದ್ ಮುಂತಾದವರು ಯುವ ಮುಖಂಡರು ಉಪಸ್ಥಿತರಿದ್ದರು.
ವರದಿ : ವೀರೇಶ್ ಗುಗ್ಗರಿ