ಸಿಂಧನೂರು ತಾಲೂಕಿನ ತುರುವಿಹಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 1975 ರಿಂದ 80ನೇ ಸಾಲಿನಲ್ಲಿ ಎಸ್ಸೆಸ್ಸೆಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಎಂ.ಡಿ ಪತ್ತಾರ್ ವಿದ್ಯಾರ್ಥಿ ಜೀವನದಿಂದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಿದಾಗ ಮಾತ್ರ ಶಿಕ್ಷಣ ನೀಡಿದ ಶಿಕ್ಷಕನ ಸೇವೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಂತರ ಹಳೆಯ ವಿದ್ಯಾರ್ಥಿಯಾದ ಡಿ.ಎಚ್. ಕಂಬಳಿ ಮಾತನಾಡಿ ನಾವುಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಅಗಲಿದ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಮೌನಾಚರಣೆ ಮಾಡುವ ಮೂಲಕ ಶಿಕ್ಷಕರಿಗೆ ಗೌರವ ನಮನ ಸಲ್ಲಿಸಿದರು. ಹಾಗೂ ಉಳಿದೆಲ್ಲಾ ಶಿಕ್ಷಕರಿಗೆ ನೆನೆಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಹಳೆಯ ಗೆಳೆಯರು ಹಾಗೂ ಗೆಳತಿಯರು ಪರಿಚಯ ಮಾಡಿಕೊಳ್ಳುತ್ತಾ, ಪ್ರೌಢ ಶಾಲೆಯ ಹಂತದಲ್ಲಿ ನಡೆದ ಅನುಭವಗಳನ್ನು ಹಂಚಿಕೊಂಡರು ನಮ್ಮ ಸ್ನೇಹ ಶಾಸ್ವತವಾಗಲಿ ಎಂದರು. ನಂತರ ಎಲ್ಲರು ಸೇರಿ ಪ್ರೀತಿಯ ಭೋಜನ ಸೇವಿಸಿದರು.
ಕಾರ್ಯಕ್ರಮವನ್ನು ರುದ್ರಸ್ವಾಮಿ ಕೆಂಡದಮಠ ನಿರೂಪಿಸಿದರು, ಶಂಕರ ನಾಯಕ್ ವಂದಿಸಿದರು.
ಈಶ್ವರಪ್ಪ, ಮುದಿಯಪ್ಪ, ಸೋಮಲಿಂಗಪ್ಪ. ಶ್ರೀಮತಿ ಕೋಟ್ರಮ್ಮ ಹಾಗೂ ಹಳೆಯ ವಿದ್ಯಾರ್ಥಿಗಳಾದ ನಿಂಗಪ್ಪ ಕಟ್ಟಿಮನಿ, ಬಸವರಾಜ ಸಜ್ಜನ್, ಯಂಕರೇಡೆಪ್ಪ ಹೋಸಳ್ಳಿ, ಕರೆಶಪ್ಪ ಸಾಹುಕಾರ, ಗೋವಿಂದ್ ರೆಡ್ಡೆಪ್ಪ, ಸಿದ್ದನಗೌಡ ಗುಜ್ಜಳ್ಳಿ, ಲಿಂಗರಾಜ ಎಲೆಕೂಡ್ಲಿಗಿ, ರಾಚಪ್ಪ ಶೆಟ್ಟಿ, ಸತ್ತೆಪ್ಪ ಸಾಹುಕಾರ,ಹಂಪಣ್ಣ ಗುಜ್ಜಳ್ಳಿ,ಹಾಗೂ 1975-80 ಸಾಲಿನ ವಿದ್ಯಾರ್ಥಿಗಳು ಇದ್ದರು.
ರಿಪೋರ್ಟರ್ ಮೆಹಬೂಬ ಮೋಮಿನ
Tags
ಟಾಪ್ ನ್ಯೂಸ್