ತುರ್ವಿಹಾಳ :
ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಗುರುವಾರ ಸಿಐಟಿಯು ಹೋರಾಟ ಸಮಿತಿ ತುರ್ವಿಹಾಳ ಘಟಕದಿಂದ ಆಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಸ್ಥಳಿಯ ಬೇಡಿಕೆಗಳನ್ನು ಈಡೇರಿಸಲು ರಸ್ತರೋಕ ಮೂಲಕ ತಹಸೀಲ್ದಾರ ಗೆ ಮನವಿ ಮಾಡಲಾಯಿತು.
ನಂತರ ಕೆ ಜಿ,ವೀರೇಶ ಜಿಲ್ಲಾ ಕಾರ್ಯದರ್ಶಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ದುರಾಡಳಿತದಿಂದ ಜನ ಸಾಮಾನ್ಯರ ದಿನ ಬಳಕೆಯ ಅಗತ್ಯ ವಸ್ತುಗಳಾದ ಗ್ಯಾಸ್,
ಪೆಟ್ರೋಲ್,ಡೀಸೆಲ್, ಅಡುಗೆಎಣ್ಣೆ, ಬೇಳೆ,ದವಸು ಧಾನ್ಯಗಳು ಇನ್ನಿತರ ವಸ್ತುಗಳ ಬೆಲೆ ಗಗನಕ್ಕೆ ಏರಿವೆ,ದಿನಗೂಲಿ ನಂಬಿ ಬದುಕುವ ಕಟ್ಟಡ ಕಾರ್ಮಿಕರು,ಹಮಾಲಿ ಕಾರ್ಮಿಕರು, ಬಿಸಿಊಟ ನೌಕರರು,ಅಂಗನವಾಡಿ ನೌಕರರು, ಆಶಾ ಕಾರ್ಯಕತಯರು ರೈತರು, ಕೃಷಿಕರು. ಮಧ್ಯಮ ವರ್ಗ ಇವರಿಗೆದವರಿಗೆ ಬೆಲೆ ಏರಿಕೆಯಿಂದಾಗಿ ನುಂಗಲಾದ ತುತ್ತಾಗಿದೆ. ಇದರಿಂದ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದು ಸರ್ಕಾರದ ಬೆಲೆ ಏರಿಯ ನೀತಿಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಹಾಗೂ ಮರಿಸ್ವಾಮಿ ಹತ್ತಿಗುಡ್ಡ ಕಾರ್ಯದರ್ಶಿ ಮಾತನಾಡಿ ಸುಪ್ರೀಮ್ ಕೋಟ್ ಆದೇಶದಂತೆ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಮತ್ತು ಸ್ಥಳಿಯ ಬೇಡಿಕೆಗಳಿಗೆ ಸಂಬಂಧಿಸಿದಂತೆ ತುರುವಿಹಾಳ ಪಟ್ಟಣದಲ್ಲಿ ಸರಕಾರಿ ಪಿಯುಸಿ ಸೈನ್ಸ್ ಕಾಲೇಜ್ ಮತ್ತು ಹಾಸ್ಟೇಲ್‌ನ್ನು ಮಂಜೂರಿ ಮಾಡಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿ ಕೊಡಬೇಕು ಎಂದು ಹೇಳಿದರು,
ಈ ಸಂದರ್ಭದಲ್ಲಿ ಎಸ್,ದೇವೇಂದ್ರಗೌಡ,ಯಂಕಪ್ಪ ಕೆಂಗಲ್, ನಿಂಗಪ್ಪ,ಅಪ್ಪಣ್ಣಕಾಬ್ಳೆ.ಕಟ್ಟಡ ಕಾರ್ಮಿಕ ಮುಖಂಡರಾದ ಮುನಿಸ್ವಾಮಿ,ಹೋನ್ನೂರಪ್ಪ ಕುಂಬಾರ,ನಿರುಪಾದಿ ದಾಸರ,ಮಲ್ಲಯ್ಯ ನಾಯಕ್
ಕರಿಯಪ್ಪ ನಾಯಕ್,ನಾಗಲಿಂಗ ಮೇಸ್ತ್ರಿ,
ಜಾಂಹಗಿರ್ ಪಾಷಾ,ಈರಪ್ಪ,ಶಂಕ್ರಪ್ಪ ದಾಸರ, ಶಿವಪುತ್ರಪ್ಪ ಡಿ ಎಸ್ ಎಸ್ .ನಾಗನಗೌಡ.ಹಾಗೂ ಬಿಸಿಯೂಟ ನೌಕರರು ಇದ್ದರು.
ವರದಿ : ಮೆಹಬೂಬ್ ಮೊಮಿನ್
Tags
ರಾಜಕೀಯ