BJP : ಬೊಮ್ಮಾಯಿ ದ್ವೇಷದ ರಾಜಕಾರಣಿ, ಟಿಕೆಟ್ ಮಿಸ್ ಆದಂತೆ ಸಿಎಂ ವಿರುದ್ಧ ಓಲೇಕಾರ್ ಕಿಡಿ


ಬೊಮ್ಮಾಯಿ ದ್ವೇಷದ ರಾಜಕಾರಣಿ, ಟಿಕೆಟ್ ಮಿಸ್ ಆದಂತೆ ಸಿಎಂ ವಿರುದ್ಧ ಓಲೇಕಾರ್ ಕಿಡಿ

ರಾತ್ರೋರಾತ್ರಿ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಹಂತದ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳು ಕೆಂಡಾಮಂಡಲವಾಗಿದ್ದಾರೆ.

ಇದೇ ಸಾಲಿಗೆ ಹಾಲಿ ಶಾಸಕ ನೆಹರು ಓಲೇಕಾರ್ ಕೂಡ ಸೇರಿದ್ದು, ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೊಮ್ಮಾಯಿ ದ್ವೇಷದ ರಾಜಕಾರಣಿ, ನನಗೆ ಟಿಕೆಟ್ ಮಿಸ್ ಆಗೋದಕ್ಕೆ ಅವರು ಹಾಗೂ ಜಿಲ್ಲಾಧ್ಯಕ್ಷ ಸಿದ್ದರಾಜ ಕಲ್ಲಕೋಟಿ ಕಾರಣ.

ರಾಷ್ಟ್ರೀಯ ನಾಯಕರಿಗೆ ಸಿಎಂ ಬೊಮ್ಮಾಯಿ ನಿಜ ಬಣ್ಣ ತೋರಿಸುತ್ತೇನೆ, ಹಗರಣಗಳನ್ನು ಬಯಲಿಗೆಳಿತೀನಿ, ಅವರು ಮಾಡಿದ ಘನಕಾರ್ಯಗಳು ಜನರಿಗೂ ಗೊತ್ತಾಗಲಿ, ಸೂಕ್ತ ತನಿಖೆ ಆಗಬೇಕು ಎಂದಿದ್ದಾರೆ.

ಸಿಎಂ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದು, ಹನಿ ನೀರಾವರಿಯ ೧೫೦೦ ಕೋಟಿ ಬೊಮ್ಮಾಯಿ ಜೇಬಲ್ಲಿದೆ, ಅವರಿಗೆ ಬೇಕಾದವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾವೇನು ಎಂದು ಅವರಿಗೆ ಗೊತ್ತಾಗುವಂತೆ ಮಾಡ್ತೇವೆ, ಬೊಮ್ಮಾಯಿ ಹೇಗೆ ಗೆಲ್ತಾರೆ ನಾನು ನೋಡ್ತೀನಿ, ನಮ್ಮ ಜಿಲ್ಲೆ ಹಾಳು ಮಾಡ್ತಾರೆ. ಇವರ ನಾಟಕ ಬಯಲಿಗೆಳೀತಿನಿ ಎಂದಿದ್ದಾರೆ.

ವರದಿ : ಬಸವರಾಜ ಕಬಡ್ಡಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">