ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲ ಬಿಜೆಪಿ ಟಿಕೆಟ್?
ಕ್ಷೇತ್ರ – ಅಭ್ಯರ್ಥಿ
ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್,
ಬಸವನ ಬಾಗೇವಾಡಿ- ಎಸ್.ಕೆ ಬೆಳ್ಳುಬ್ಬಿ,
ಇಂಡಿ- ಕಾಸಾಗೌಡ ಬಿರಾದಾರ್,
ಗುರಮಿಠಕಲ್- ಲಲಿತಾ ಅನಾಪುರ್,
ಬೀದರ್- ಈಶ್ವರ್ ಸಿಂಗ್ ಠಾಕೂರ್,
ಭಾಲ್ಕಿ- ಪ್ರಕಾಶ್ ಖಂಡ್ರೆ,
ಗಂಗಾವತಿ- ಪರಣ್ಣ ಮುನವಳ್ಳಿ,
ಕಲಘಟಗಿ- ನಾಗರಾಜ್ ಛಬ್ಬಿ,
ಹಾನಗಲ್- ಶಿವರಾಜ್ ಸಜ್ಜನರ್,
ಹಾವೇರಿ (ಎಸ್‌ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್,
ಹರಪ್ಪನಹಳ್ಳಿ- ಕರುಣಾಕರ್ ರೆಡ್ಡಿ,
ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್,
ದಾವಣಗೆರೆ ದಕ್ಷಿಣ- ಅಜಯ್ ಕುಮಾರ್,
ಮಾಯಕೊಂಡ (ಎಸ್‌ಸಿ)- ಬಸವರಾಜ್ ನಾಯ್ಕ್,
ಚನ್ನಗಿರಿ- ಶಿವಕುಮಾರ್,
ಬೈಂದೂರು- ಗುರುರಾಜ್ ಗಂಟಿಹೊಳೆ,
ಮೂಡಿಗೆರೆ (ಎಸ್‌ಸಿ)- ದೀಪಕ್ ದೊಡ್ಡಯ್ಯ,
ಗುಬ್ಬಿ- ಎಸ್‌ಡಿ ದಿಲೀಪ್ ಕುಮಾರ್,
ಶಿಡ್ಲಘಟ್ಟ- ರಾಮಚಂದ್ರ ಗೌಡ,
ಕೋಲಾರ ಗೋಲ್ಡ್ ಫೀಲ್ಡ್ (ಎಸ್‌ಸಿ)- ಅಶ್ವಿನಿ ಸಂಪಂಗಿ,
ಶ್ರವಣ ಬೆಳಗೊಳ- ಚಿದಾನಂದ,
ಅರಸೀಕರೆ- ಜಿವಿ ಬಸವರಾಜ್
ಹೆಗಡಗಡ ದೇವನ ಕೋಟೆ (ಎಸ್‌ಟಿ)- ಕೃಷ್ಣ ನಾಯ್ಕ್.
ಬಿಜೆಪಿ ಮೊದಲ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿತ್ತು. 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಒಬಿಸಿಯ 32, ಎಸ್‌ಸಿ 30, ಎಸ್‌ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿತ್ತು. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿತ್ತು.
ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿತ್ತು. ಹಲವೆಡೆ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ ಹಾಗೂ ಕೆಲವು ಕಡೆ ಟಿಕೆಟ್ ವಂಚಿತರು ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವು ದೊರೆತಿದ್ದರಿಂದ ಅತೃಪ್ತರನ್ನು ಶಮನಗೊಳಿಸಲು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ರಾತ್ರಿ ರಾಜ್ಯಕ್ಕೆ ಬಂದಿದ್ದಾರೆ.