ಕಂಪ್ಲಿ : ಹೊಸ ನೆಲ್ಲೂಡಿ ದಲಿತ ಸಂಘರ್ಷದಿಂದ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ 132ನೇ ಜಯಂತಿ ಆಚರಣೆ.
ಕಂಪ್ಲಿ ಸಮೀಪದ ಹೊಸ ನೆಲ್ಲೂಡಿ ಗ್ರಾಮದಲ್ಲಿ ಶುಕ್ರವಾರದಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ 132 ನೇ ಜಯಂತೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು..
ಈ ಸಮಯದಲ್ಲಿ ಮಾತನಾಡಿದ ಪರಿಶಿಷ್ಟ ಜಾತಿ ಕಾಲೋನಿಯ ಗ್ರಾಮ ಪಂಚಾಯಿತಿಯ ಸದಸ್ಯ ಕೆ.ಉಮೇಶ್ ಪ್ರತಿವರ್ಷದಂತೆ ಈ ವರ್ಷವೂ ಸಹ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಿದ್ದೇವೆ.. ನೀತಿ ಸಮಿತಿ ಕಾಯ್ದೆ ಇರುವುದರಿಂದ ದಲಿತ ಸಮುದಾಯದವರು ಎಲ್ಲರೂ ಸೇರಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಡಾಕ್ಟರ್ ಬಿ.ಆರ್.. ಅಂಬೇಡ್ಕರ್ ಅವರ ಬೋರ್ಡಿಗೆ ಮಾಲಾರ್ಪಣೆ ಮಾಡಿ ಸರಳವಾಗಿ ಜಯಂತಿಯನ್ನು ಆಚರಣೆ ಮಾಡಿದವು ಮುಂದಿನ ವರ್ಷ ನಮ್ಮ ಸಮುದಾಯದವರು ಎಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಮಾಡಬೇಕಾಗಿ ಚಿಂತನೆಗಳನ್ನು ನಡೆಸಿದ್ದೇವೆ ಎಂದು ತಿಳಿಸಿದರು....
ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಜಯಂತಿಯ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಂಘದ ವತಿಯಿಂದ ಹಾಗೂ ಪರಿಶಿಷ್ಟ ಜಾತಿ ಕಾಲೋನಿಯ ಎಲ್ಲರೂ ಸಹೋದರರು ಸೇರಿ ಬಹಳ ಸಂತೋಷ ಸಡಗರದಿಂದ ಭಾಗವಹಿಸಿದ್ದರು ಎಂದು ತಿಳಿಸಿದರು..
ಈ ಸಮಯದಲ್ಲಿ ಕರ್ನಾಟಕ ದಲಿತ ಸಂಘರ್ಷದ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಎಲ್ಲ ಪದಾಧಿಕಾರಿಗಳು ಗ್ರಾಮ ಪಂಚಾಯತಿಯ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಗೂ ಹೊಸ ನೆಲ್ಲೂಡಿ ದಲಿತ ಸಮುದಾಯದ ಮುಖಂಡರು, ಕಿರಿಯರು ಯುವಕರು ಉಪಸಿತರಿದ್ದರು...
ವರದಿ : ಚನ್ನಕೇಶವ