ಚುನಾವಣೆ ಮತದಾನ ಜಾಗೃತಿ ಜಾಥಾ
ಕೊಪ್ಪಳ,: ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಮತದಾರಿಗೆ ಮತದಾನದ ಜಾಗೃತಿಗಾಗಿ ನೂತನ ಮತ್ತು ಭವಿಷ್ಯದ ಯುವ ಮತದಾರರಿಗೆ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹುಲಿಗಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹುಲಗಿ ಗ್ರಾಮ ಪಂಚಾಯತಿ ಪಿಡಿಒ ಪರಮೇಶ್ವರಯ್ಯ .ಟಿ ಕಾರ್ಯದರ್ಶಿ ನಾಗರಾಜ ಹಲಿಗೇರಿ, ಸಂಜೀವಿನಿ ಸಂಘದ ಒಕ್ಕೂಟ ಅಧ್ಯಕ್ಷರು ನೀಲಮ್ಮ ಅನಿಸಿ, ಮಹಿಬೂಬ. ಬಿ, ಹುಸೇನ್. ಬಿ. ಜಾವಳಿ, ಯಮನೂರಮ್ಮ, ಸಾವಿತ್ರಿದೇವಿ ಹಿರೇಮಠ, ಜಯಶ್ರೀ ಹಿರೇಮಠ, ಕೌಶಲ್ಯ, ಶಭಾನಾಜ್ .ಬಿ, ಶಾಂತಮ್ಮ ಗ್ರಂಥಪಾಲಕಿ, ಮಂಗಳಾ, ಲತಾ, ಶಾರದಾ, ಅನ್ನಪೂರ್ಣ, ಮಂಜುನಾಥ, ಅಬ್ಬಾಸ್ ರವಿ ಸೇರಿದಂತೆ ಅನೇಕರು ಇದ್ದರು.
ವರದಿ : ಶಿವಕುಮಾರ ಹಿರೇಮಠ