Koppal : ಜನಪರ ಸರಕಾರವನ್ನು ಅಧಿಕಾರಕ್ಕೆ ತನ್ನಿ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ


ವಿವಿಧ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ಬಿರುಸಿನ ಪ್ರಚಾರ

ಜನಪರ ಸರಕಾರವನ್ನು ಅಧಿಕಾರಕ್ಕೆ ತನ್ನಿ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ,: ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ. ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರೈತರ, ಮಹಿಳೆಯರ ರಕ್ಷಣೆ ಸೇರಿ ಸರ್ವ ಜನಾಂಗದ ಐಕ್ಯತೆ ಹಾಗೂ ಬಡವರ ಏಳಿಗೆ ಸಾಧ್ಯ ಎಂದು ಶಾಸಕ, ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. 

ರವಿವಾರ ತಾಲೂಕಿನ ಗೊಂಡಬಾಳ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಹಾಲವರ್ತಿ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಹಿರೇಕಾಸನಕಂಡಿ ಮತ್ತು ಅಲ್ಲಾನಗರ ಗ್ರಾಮದಲ್ಲಿ ಪ್ರಚಾರ ನಡೆಸಿ, ಮಾತನಾಡಿದರು. ದೇಶಕ್ಕೆ ಕಾಂಗ್ರೆಸ್‌ ನೀಡಿದ ಕೊಡುಗೆ ಹಾಗೂ ಸರಳ ಆಡಳಿತದ ಬಗ್ಗೆ ಮನವರಿಕೆ ಮಾಡಿದರು. ಜನರಿಗೆ ಬಿಜೆಪಿ ಸರಕಾರ ಗೆಲ್ಲುವುದಕ್ಕಿಂತ ಮುಂಚೆ ನೀಡಿದ ಭರವಸೆಗಳಾದ ರೈತರ ಆದಾಯ ದ್ವಿಗುಣ, ನಿರುದ್ಯೋಗದ ನಿವಾರಣೆಗೆ ಉದ್ಯೋಗ ಭರವಸೆ, ಮಹಿಳಾ ಸಂರಕ್ಷಣೆ, ಉಚಿತ ಶಿಕ್ಷಣ ಎಲ್ಲಿದೆ ಎಂದರು. 

ಕಾಂಗ್ರೆಸ್ ಪಕ್ಷ ಆಡಳಿಕ್ಕೆ ಬಂದ್ರೆ ಬಹದ್ದೂರ್ ಬಂಡಿ ನವಲ್ ಕಲ್ ಏತ ನೀರಾವರಿ ಯೋಜನೆ : ಗೊಂಡಬಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯ ಬಹುದಿನಗಳ ಕನಸಾಗಿದ್ದ ಬಹದ್ದೂರ್ ಬಂಡಿ ನವಲ್ ಕಲ್ ಏತ ನೀರಾವರಿ ಯೋಜನೆಯನ್ನ ಸಿದ್ದರಾಮಯ್ಯ ಅವರಿಂದ ಹಠಕ್ಕೆ ಬಿದ್ದು ಆ ಯೋಜನೆಯನ್ನ ಜಾರಿಗೋಳಿಸಿ 188 ಕೋಟಿ ಅನುಧಾನವನ್ನ ಮೀಸಲಿಟಿದ್ದೇವು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಅನುಧಾನದ ತಾರುತಮ್ಮ ಮಾಡಿ ಈ ಯೋಜನೆಗೆ ಅನುಧಾನವನ್ನ ಬೀಡುಗಡೆ ಮಾಡದೆ ಇರುವುದರಿಂದ ಯೋಜನೆಯ ಕಾಮಗಾರಿ ನಿಂತಿದ್ದು ನಮ್ಮ ಸರ್ಕಾರ ಬಂದ ತಕ್ಷಣವೇ ಈ ಯೋಜನೆಯ ಕಾಮಗಾರಿಯನ್ನ ಸಂಪೂರ್ಣಗೊಳಿಸಿ ಈ ಯೋಜನೆಯನ್ನ ರೈತರಿಗೆ ಅರ್ಪಿಸುತ್ತೇವೆ ಎಂದರು. ಈ ವೇಳೆ ಮಾಜಿ ಜಿ.ಪಂ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಿಗೇರಿ, ನಾಗನಗೌಡ ಮುಂಡರಗಿ, ಮೋತಿಲಾಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ, ವೆಂಕನಗೌಡ್ರು ಹಿರೇಗೌಡ್ರು, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಪ್ರಚಾರ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಸಜ್ಜನ, ನಗರಸಭೆಯ ಸದಸ್ಯರಾದ ಮುತ್ತುರಾಜ್ ಕುಷ್ಟಗಿ, ಬಸಯ್ಯ ಹಿರೇಮಠ, ಮುಖಂಡರಾದ ನವೋದಯ ವಿರುಪಣ್ಣ, ಹನುಮರೆಡ್ಡಿ ಅಂಗನಕಟ್ಟಿ, ತೋಟಪ್ಪ ಕಾಮನೂರು, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ಹನಮಂತಪ್ಪ ಜಲವರ್ಧನಿ, ವೆಂಕಟೇಶ ಹಾಲವರ್ತಿ, ಪಂಪಣ್ಣ ಪೂಜಾರ, ಆನಂದ ಕಿನ್ನಾಳ, ಹನಮೇಶ ಹೊಸಳ್ಳಿ, ಮುದಿಯಪ್ಪ ಆದೋನಿ, ನಿಂಗಜ್ಜ ಶಹಾಪುರ, ಮಲ್ಲು ಪೂಜಾರ  ಸೇರಿದಂತ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ವರದಿ : ಶಿವಕುಮಾರ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">