Modi : ಪ್ರಧಾನಿ ಮೋದಿ ಕಣ್ತುಂಬಿಕೊಂಡ ಅದ್ಭುತ ದೃಶ್ಯಗಳಿವು!

ಪ್ರಧಾನಿ ಮೋದಿ ಕಣ್ತುಂಬಿಕೊಂಡ ಅದ್ಭುತ ದೃಶ್ಯಗಳಿವು!

ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಬಂಡೀಪುರಕ್ಕೆ ಆಗಮಿಸಿರುವ ಪ್ರಧಾನಿ‌ ಮೋದಿ, ಬಂಡೀಪುರ ಹುಲಿ‌ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದರು. 

ಇಂದು ಬೆಳಿಗ್ಗೆ 7.35ರ ಸುಮಾರಿಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿದ ಬಳಿಕ 7.50ಕ್ಕೆ ತೆರೆದ ಜೀಪ್‌ನಲ್ಲಿ (ಬೊಲೆರೊ ಕ್ಯಾಂಪರ್) ಸಫಾರಿಗೆ ತೆರಳಿದರು.

ಸಫಾರಿಯಲ್ಲಿ 22 ಕಿ.ಮೀ ಸಂಚರಿಸಿ ಬಂಡೀಪುರದ ಅರಣ್ಯ, ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು. ಈ ವೇಳೆ ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಎದುರಾದವು. 

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಣ್ತುಂಬಿಕೊಂಡು ಅದ್ಭುತ ದೃಶ್ಯಗಳನ್ನು ನೀವೂ ನೋಡಿ.

ವರದಿ : ಬಸವರಾಜ ಕಬಡ್ಡಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">