Kukanuru : ವಿಧಾನಸಭಾ ಚುನಾವಣೆ ಹಿನ್ನೆಲೆ : ಕುಕನೂರು ಪಟ್ಟಣದಲ್ಲಿ ಪಥಸಂಚಲನ

ವಿಧಾನಸಭಾ ಚುನಾವಣೆ ಹಿನ್ನೆಲೆ : ಕುಕನೂರು ಪಟ್ಟಣದಲ್ಲಿ ಪಥಸಂಚಲನ

ಕುಕನೂರು  : ಕರ್ನಾಟಕ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಮುಕ್ತ ನ್ಯಾಯ ಸಮ್ಮತ ಚುನಾವಣೆ ನಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ನಡೆಯಿತು.
ತಾಲೂಕು ಚುನಾವಣಾಧಿಕಾರಿ ಕಾವ್ಯಾರಾಣಿ ಕೆ ವಿ ಅವರು ಹಸಿರು ದ್ವಜ ತೋರಿಸುವ ಮೂಲಕ ಪಥಸಂಚಲನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಸಿ ಪಿ ಐ ವೀರಾ ರೆಡ್ಡಿ,ಕುಕನೂರು ತಹಸೀಲ್ದಾರ್ ರತ್ನಪ್ರಭಾ,ಕುಕನೂರು ಠಾಣೆಯ ಪಿ ಎಸ್ ಐ ಡಾಕೇಶ್ ಯು, ಕುಕನೂರು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ್ರಕಾಶ್ ಬಾಗಲೇ,ಸೇರಿದಂತೆ ಯಲಬುರ್ಗಾ, ಕುಕನೂರು, ಬೆವೂರು ಠಾಣೆಯ ಪೊಲೀಸ್ ಸಿಬಂದಿಗಳು, ಟಿಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ಸಿಬಂದಿಗಳು ಪಥ ಸಂಚನದಲ್ಲಿ ಪಾಲ್ಗೊಂಡಿದ್ದರು.
 ಪಟ್ಟಣದ ಡಾ. ಬಿ ಆರ್.ಅಂಬೇಡ್ಕರ್ ವೃತ್ತದಿಂದ ಕೋಳಿ ಪೇಟೆ, ಮಹಾಮಾಯ ದೇವಸ್ಥಾನ, ವೀರಭದ್ರಪ್ಪ ವೃತ್ತ ದಿಂದ ಕಿತ್ತೂರು ಚೆನ್ನಮ್ಮ ವೃತ್ತದ ವರೆಗೂ ಪಥ ಸಂಚಲನ ನಡೆಯಿತು.

ವರದಿ : ಈರಯ್ಯ ಕುರ್ತಕೋಟಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">