ಬಿಜೆಪಿಗೆ ಪಕ್ಷಕ್ಕೆ ಸಾವಿರಾರು ಕಾರ್ಯಕರ್ತರ ವಲಸೆ
ಕುಕನೂರು : ಆಡಳಿತಾರೂಢ ಬಿಜೆಪಿ ಪಕ್ಷದ ಕಡೆಗೆ ವಿವಿಧ ಪಕ್ಷಗಳಿಂದ ವಲಸೆ ಪರ್ವ ಮುಂದುವರೆದಿದ್ದು ಇಂದೂ ಕೂಡಾ ಸಾವಿರಾರು ಕಾರ್ಯಕರ್ತರು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಮಸಬಹಂಚಿನಾಳ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಿರೇ ವಂಕಲಕುಂಟಾ, ಚಿಕ್ಕ ಮ್ಯಾಗೇರಿ, ಮುಧೋಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್, ಜೆಡಿಎಸ್ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಸಚಿವ ಹಾಲಪ್ಪ ಆಚಾರ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮತ್ತು ಸ್ಥಳೀಯ ಶಾಸಕ ಹಾಲಪ್ಪ ಆಚಾರ್ ಅವರ ಜನಪ್ರಿಯತೆ,ಸರಳತೆ ಮೆಚ್ಚಿ ಮುಖಂಡರಾದ ಗಾಳೆಪ್ಪ ಓಜನಳ್ಳಿ, ಶಂಕ್ರಪ್ಪ ವಕೀಲರು, ಅಯ್ಯಪ್ಪ ಗುಳೇದ, ಫಕೀರಪ್ಪ ತಳವಾರ್, ಮಹದೇವಪ್ಪ ಮೂಲಿಮನಿ ಇವರ ನೇತೃತ್ವದಲ್ಲಿ ಮಸಾರಿ ಭಾಗದ ಸಾವಿರಾರು ಕಾರ್ಯಕರ್ತರು ಬಿಜೆಪಿ ಪಕ್ಷ ಸೇರಿದರು.
ನಂತರ ಮಾತನಾಡಿದ ಸಚಿವ ಹಾಲಪ್ಪ ಆಚಾರ್, ಶಾಸಕರಾಗಿ,ಮಂತ್ರಿಯಾಗಿ ಸಿಕ್ಕ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಿದ ತೃಪ್ತಿ ನನಗಿದೆ, ನೀರಾವರಿ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ. 2013 ರಲ್ಲಿ ಮೊದಲ ಹಂತದ ಕೃಷ್ಣಾ ಬಿ ಸ್ಕೀಮ್ ನ ಕೆರೆ ತುಂಬಿಸುವ ಯೋಜನೆಗೆ ಸಾವಿರ ಕೋಟಿ ಅನುದಾನ ತರಲಾಗಿದೆ, ಎರಡನೇ ಹಂತದ ಯೋಜನೆಗೆ 1750 ಕೋಟಿ ರೂ ಅನುದಾನದಲ್ಲಿ ಕೆಲಸ ನಡೆಯುತ್ತಿದೆ, ಯೋಜನೆ ಎಲ್ಲಾ ತಾಲೂಕಿಗೆ ವಿಸ್ತರಣೆ ಆಗಲಿದೆ ಎಂದರು.
ಯಲಬುರ್ಗಾಕ್ಕೆ ನೀರು ಬರಲ್ಲ, ನೀರಾವರಿ ಆಗಲ್ಲ ಅಂದವರು ಕೆಂಪು ಕೆರೆಗೆ ಕೃಷ್ಣಾ ನೀರು ಬಂದಿದ್ದನ್ನು ಕಂಡು ಈಗ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ರಾಯರಡ್ಡಿ ವಿರುದ್ಧ ಹಾಲಪ್ಪ ಆಚಾರ್ ವಾಗ್ದಾಳಿ ನಡೆಸಿದರು.
ಮಿಂಚು ಹರಿಸಿದ ಸಿ ಎಸ್ ಪೊಲೀಸ್ ಪಾಟೀಲ್ ಮಾತು : ಬಿಜೆಪಿ ಟಿಕೆಟ್ ಹಾಲಪ್ಪ ಆಚಾರ್ ಅವರಿಗೆ ಸಿಗಲಿದೆ, ಹಾಲಪ್ಪ ಆಚಾರ್ ಈಗಾಗಲೇ ಗೆದ್ದಿದ್ದಾರೆ, ಇನ್ನೇನಿದ್ರೂ ಲೀಡ್ ಬಗ್ಗೆ ಮಾತ್ರ ಲೆಕ್ಕಾಚಾರ, ಮೇ 13 ನೇ ತಾರೀಖು ಎಲ್ಲರೂ ಬಣ್ಣ ಹಚ್ಚಿಕೊಳ್ಳಲು ಸಿದ್ದರಾಗಿ ಎಂದು ಮುಖಂಡ ಸಿ ಎಸ್ ಪೊಲೀಸ್ ಪಾಟೀಲ್ ಹೇಳುತ್ತಿದ್ದಂತೆ ವೇದಿಕೆಯಲ್ಲಿ ಮಿಂಚಿನ ಸಂಚಾರಉಂಟಾಗಿ ಕಾರ್ಯಕರ್ತರು ಸಿಳ್ಳೆ, ಕೇಕೆ, ಜೈಕಾರ ಹಾಕಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಸಿ ಎಸ್ ಪೊಲೀಸ್ ಪಾಟೀಲ್, ರತನ್ ದೇಸಾಯಿ, ಅಯ್ಯನಗೌಡ ಕೆಂಚಮ್ಮನವರ್, ಬಸನಗೌಡ ತೊಂಡಿಹಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ