Manvi- ವನಸಿರಿ ಫೌಂಡೇಶನ್ ಮಾನ್ವಿ ಘಟಕದ ವತಿಯಿಂದ ಪಕ್ಷಿಗಳಿಗೆ ಅರವಟ್ಟಿಗೆ ಕಾರ್ಯಕ್ರಮ

ವನಸಿರಿ ಫೌಂಡೇಶನ್ ಮಾನ್ವಿ ಘಟಕದ ವತಿಯಿಂದ ಪಕ್ಷಿಗಳಿಗೆ ಅರವಟ್ಟಿಗೆ ಕಾರ್ಯಕ್ರಮ ಶನಿವಾರ ತುಂಬಾ ಅದ್ಭುತವಾಗಿ ನೆರವೇರಿತು.
    ಇದೇ ಸಂದರ್ಭದಲ್ಲಿ ಮಾನ್ವಿ ತಾಲೂಕಿನ ಹಿರಿಯ ಸಾಹಿತಿಗಳು ಶ್ರೀ ರಮೇಶ ಬಾಬು ಯಾಳಗಿ ಸರ್ ಅವರು ಪರಿಸರದ ಬಗ್ಗೆ ಅವರೇ ಸ್ವತಹ ಗೀತೆಯನ್ನು ರಚಿಸಿದ ಹಾಡನ್ನು ಹಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಪರಮ ಪೂಜ್ಯರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಮಾನ್ವಿ ತಾಲೂಕ ಘಟಕದ ಅದ್ಯಕ್ಷರಾದ ಶ್ರೀ ಶರಣಬಸವ ಕೊಟ್ನೆಕಲ್,  ವಿವಿಧ ಗಣ್ಯರು, ಪರಿಸರ ಪ್ರೇಮಿಗಳು, ವನಸಿರಿ ಫೌಂಡೇಶನ್ ಸರ್ವ ಸದಸ್ಯರ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


Previous Post Next Post

Contact Form

f="https://unpkg.com/video.js/dist/video-js.css" rel="stylesheet">