ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿಜಯನಗರ ಶಾಲೆಯ ವಿದ್ಯಾರ್ಥಿನಿಯರು
ಕಂಪ್ಲಿ: ಬಳ್ಳಾರಿಯ ಸಂತ ಜಾನರ ಪ್ರೌಢಶಾಲೆ (ಕೋಟೆ)ಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜಯನಗರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ತೋರಿ, ವಿಜಯದ ನಗಾರಿ ಬಾರಿಸಿದ್ದಾರೆ.
ಗಜಲ್ ವಿಭಾಗದಲ್ಲಿ ಬಿಬಿ ಖತೀಜ, ಚರ್ಚಾ ಸ್ಪರ್ಧೆ ವಿಭಾಗದಲ್ಲಿ ಕೆ. ಮೋಕ್ಷಿತ ಹಾಗೂ ಕವ್ವಾಲಿ ವಿಭಾಗದಲ್ಲಿ ಖೈರುನ್ನಿಸ ಮತ್ತು ತಂಡದ ಸದಸ್ಯರಾದ ಸಬಿಯಾ ಬೇಗಂ, ಬಿಬಿ ಖತೀಜಾ, ಬಿಬಿ ಹಾಜರ, ಸಾನಿ ನಿಶಾ, ಮುಬೀನಾ ಅವರು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದರು.
ಸಿದ್ದಿ ಟಿವಿ, ಕಂಪ್ಲಿ

