Siruguppa : ಎಗ್ಗಿಲ್ಲದೆ ನಡೆಯುತ್ತಿದೆ ಮರಳು ದಂಧೆ... 'ಮಾಮೂಲಿ' ಆಸೆಗೆ ಕಣ್ಮುಚ್ಚಿ ಕುಳಿತಿದ್ದಾರ ಅಧಿಕಾರಿಗಳು !

ಎಗ್ಗಿಲ್ಲದೆ ನಡೆಯುತ್ತಿದೆ ಮರಳು ದಂಧೆ... 'ಮಾಮೂಲಿ' ಆಸೆಗೆ ಕಣ್ಮುಚ್ಚಿ ಕುಳಿತಿದ್ದಾರ ಅಧಿಕಾರಿಗಳು,,,,,,,!

ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಪೊಲೀಸರು, ಕಂದಾಯ ಇಲಾಖೆ, ಗ್ರಾಮ  ಪಂಚಾಯಿತಿ ಅಧಿಕಾರಿಗಳು, ಮೌನವಾಗಿದ್ದಾರೆ,

ಇವರ ಈ ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಇವರ ಈ ಮೌನ ಕಂಡಾಗ ಪರೋಕ್ಷವಾಗಿ ಇವರು ಇದನ್ನು ಬೆಂಬಲಿಸುವಂತೆ ಕಾಣುತ್ತಿದೆ,,, ಆದ್ದರಿಂದ ಮರಳು ಮಾಫಿಯಾ ದವರು ನೀಡುವ ' ಮಾಮೂಲಿ ಇವರನ್ನೆಲ್ಲ ಮೌನವಾಗಿರುವಂತೆ ಮಾಡಿತ್ತಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ...
ಸಿರುಗುಪ್ಪ ತಾಲೂಕು ಭತ್ತದ ನಾಡು ಎಂದು ಖ್ಯಾತಿ ಪಡೆದಿದ್ದು ಈಗ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ರಾತ್ರೋರಾತ್ರಿ ತುಂಗಭದ್ರ ನದಿಯಲ್ಲಿ ಟ್ರ್ಯಾಕ್ಟರ್ ಯಂತ್ರ ಬಳಸಿ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ರಾಜಾರೋಷವಾಗಿ ಕೊಳ್ಳೆ ಹೊಡೆಯುತ್ತಿದ್ದರು, ಅಧಿಕಾರಿಗಳು ಮೌನ ವಹಿಸುತ್ತಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ....

ಇಲ್ಲಿ ರಾತ್ರಿ ಸಮಯದಲ್ಲಿ ಅಕ್ರಮವಾಗಿ ನದಿಯ ಗರ್ಭ ಸೀಳಿ ವೈಜ್ಞಾನಿಕವಾಗಿ ಮರಳು ತೆಗೆಯಲಾಗುತ್ತಿದೆ... ಈ ಮರಳಿಗೆ ಉತ್ತಮ ಬೆಲೆ ಇದ್ದು, ದಿನನಿತ್ಯ ಎಷ್ಟೋ ಟ್ರ್ಯಾಕ್ಟರ್ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಹೊರ ಊರುಗಳಿಗೆ ಸಾಗಿಸಲಾಗುತ್ತದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ....

ವರದಿ : ಎಂ ಪವನ್ ಕುಮಾರ್, ಸಿದ್ದಿ ಟಿವಿ,  ಸಿರುಗುಪ್ಪ
Previous Post Next Post

Contact Form

f="https://unpkg.com/video.js/dist/video-js.css" rel="stylesheet">