ವಿಜಯನಗರ:
ಟಿಕೆಟ್ ಘೋಷಣೆ ಬೆನ್ನಲ್ಲೇ ಹಂಪಿ ವಿರೂಪಾಕ್ಷನ ದರ್ಶನ ಪಡೆದ ಸಿದ್ಧಾರ್ಥ ಸಿಂಗ್
ಸಿದ್ಧಾರ್ಥ ಸಿಂಗ್ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಟಿಕೆಟ್ ಘೋಷಣೆ ಆಗ್ತಿದ್ದಂತೆಯೇ ತಂದೆ ಆನಂದ್ ಸಿಂಗ್ ಅವರಂತೆ ಟೆಂಪಲ್ ರನ್ ಆರಂಭಿಸಿದ ಸಿದ್ಧಾರ್ಥ
ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನದ ನಂತರ ವಿರೂಪಾಕ್ಷನ ದರ್ಶನ ಪಡೆದ ಸಿದ್ಧಾರ್ಥ ಸಿಂಗ್
ದರ್ಶನ ಪಡೆದ ನಂತರ ತಂದೆ ಆನಂದ್ ಸಿಂಗ್ ಅವರಿಂದ ಮಗನಿಗೆ ಸಿಹಿ ಹಂಚಿಕೆ
ಅಭಿಮಾನಿಗಳು ಕಾರ್ತಕರ್ತರಿಗೂ ಸಿಹಿ ಹಂಚಿದ ಸಿಂಗ್
ವಿರೂಪಾಕ್ಷ ದೇವಸ್ಥಾನದ ಆನೆ ಲಕ್ಷ್ಮಿಯಿಂದ ಹೂಮಾಲೆಯ ಆಶೀರ್ವಾದ
ದರ್ಶನ ಪಡೆದ ನಂತರ ಸಚಿವ ಆನಂದ್ ಸಿಂಗ್ ಹೇಳಿಕೆ
ರಾಜ್ಯ ಹಾಗೂ ರಾಷ್ಟ್ರ ನಾಯಕರ ಆಶಯದಂತೆ ಯುವಕರಿಗೆ ಪಕ್ಷದಿಂದ ಮನ್ನಣೆ
ಹೀಗಾಗಿ ಸಿದ್ಧಾರ್ಥ ಸಿಂಗ್ ಗೆ ಟಿಕೆಟ್ ದಕ್ಕಿದೆ
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮಕೆಲಸಗಳೇ ನಮಗೆ ಶ್ರೀರಕ್ಷೆ
ಸಿದ್ಧಾರ್ಥಸಿಂಗ್ ಗೆಲ್ಲಲಿದ್ದಾರೆ, ಅವರ ಗೆಲುವಿಗೆ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ
ತಮ್ಮ ಮುಂದಿನ ನಡೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸಿದ ಆನಂದ್ ಸಿಂಗ್
ಸದ್ಯಕ್ಕೆ ನಾನು ಮತ್ಯಾವ ಕ್ಷೇತ್ರದ ಕುರಿತು ಯೋಚಿಸಿಲ್ಲ, ಸಮಾಜ ಸೇವೆಯೊಂದೇ ನನ್ನ ಮುಂದಿನಗುರಿ
ಅಂಬೆಗಾಲಿಡುವ ನೂತನ ಜಿಲ್ಲೆಯ ಅಭಿವೃದ್ಧಿಯನ್ನು ಚಿರತೆಯ ವೇಗದಂತೆ ಅಭಿವೃದ್ಧಿ ಮಾಡ್ತೀವಿ
ಡಬಲ್‌ಇಂಜಿನ್ ಸರ್ಕಾರದಂತೆ ನಾನು ಸಿದ್ಧಾರ್ಥ ಸಿಂಗ್ ಈ ಕಾರ್ಯದಲ್ಲಿ ತೊಡಗುತ್ತೇವೆ
ಕಾಂಗ್ರೆಸ್ ಅಭ್ಯರ್ಥಿ ಎಚ್ ಆರ್ ಗವಿಯಪ್ಪ ಅವರ ಬಗ್ಗೆ ಆನಂದ್ ಸಿಂಗ್ ಮಾತು
ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದ ಸಿಂಗ್
ಪರೋಕ್ಷವಾಗಿ ಗವಿಯಪ್ಪನವರ ಒಳ್ಳೆಯತನವನ್ನು ಮೆಚ್ಚಿಕೊಂಡ ಆನಂದ್ ಸಿಂಗ್
ವಿಜಯನಗರ ಜಿಲ್ಲೆ ಹಂಪಿಯಲ್ಲಿ ಹೇಳಿಕೆ ನೀಡಿದ ಆನಂದ್ ಸಿಂಗ್
ವರದಿ : ಚನ್ನಕೇಶವ