Gangavathi : ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ; ಕೆಆರ್ ಪಿಪಿ ಮುಖಂಡರಿಂದ ದೂರು


ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ; ಕೆಆರ್ ಪಿಪಿ ಮುಖಂಡರಿಂದ ದೂರು

ಗಂಗಾವತಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕೆಆರ್‌ಪಿಪಿ ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರ ಗೌಡ ಆರೋಪಿಸಿದ್ದಾರೆ.

ಗಂಗಾವತಿಯ ಒಂದನೇ ವಾರ್ಡ್ ಪಂಪಾ ನಗರ ಸೇರಿದಂತೆ ಬಹುತೇಕ ವಾರ್ಡುಗಳ ಮನೆಗಳಲ್ಲಿ ಗೋಡೆ ಮೇಲೆ ಭಾರತೀಯ ಜನತಾ ಪಕ್ಷದ ಚಿಹ್ನೆಯುಳ್ಳ ಗೋಡೆ ಬರಹ ಬರೆಯಲಾಗಿದ್ದರೂ ಅಧಿಕಾರಿಗಳು ಅದನ್ನು ಅಳಿಸದೆ ಹಾಗೆ ಉಳಿಸಿದ್ದಾರೆ.

ನೀತಿ ಸಹಿತ ಪ್ರಕಾರ ಮನೆ ಮೇಲೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪರವಾನಿಗೆ ಇಲ್ಲದೆ ಯಾವುದೇ ಪಕ್ಷದ ಚಿಹ್ನೆಯನ್ನು ಹಾಕಬಾರದು ಅಥವಾ ಬರೆಯಬಾರದು ಗಂಗಾವತಿಯ ಬಹುತೇಕ ಕಡೆಗಳಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಇರುವ ಗೋಡೆ ಬರಹ ಕಂಡುಬರುತ್ತಿದ್ದರು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.ಕೂಡಲೇ ದೂರು ದಾಖಲಿಸಿ ಎಲ್ಲಾ ಗೋಡೆ ಬರಗಳನ್ನ ಅಳಿಸಬೇಕು. ಈ ಕುರಿತು ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗುತ್ತದೆ ಎಂದು ಮನೋಹರ ಗೌಡ ತಿಳಿಸಿದ್ದಾರೆ.

ಒಂದನೇ ವಾರ್ಡ್ ಎರಡನೇ ವಾರ್ಡು ಗಳಲ್ಲಿ ಕೆಆರ್‌ಪಿಪಿ ವತಿಯಿಂದ ಅಭ್ಯರ್ಥಿ ಗಾಲಿ ಜನಾರ್ಧನ್ ರೆಡ್ಡಿ ಅವರು ಬುಧವಾರ ಪ್ರಚಾರ ಕಾರ್ಯ ನಡೆಸಿದರು ಈ ಸಂದರ್ಭದಲ್ಲಿ ಕೆಲ ಮನೆಗಳ ಗೋಡೆ ಮೇಲೆ ಭಾರತೀಯ ಜನತಾ ಪಾರ್ಟಿಯ ಕಮಲದ ಚಿಹ್ನೆ ಇರುವ ಮತ್ತು ಭಾರತೀಯ ಜನತಾ ಪಾರ್ಟಿಗೆ ಮತ ಹಾಕುವಂತೆ ಬರಹ ಇರುವ ದೃಶ್ಯವನ್ನು ಕೆಆರ್‌ಪಿಪಿ ಕಾರ್ಯಕರ್ತರು ಭಾವಚಿತ್ರ ತೆಗೆದುಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ತಾರತಮ್ಯವನ್ನು ಖಂಡಿಸಿದ್ದಾರೆ.


ವರದಿ‌: ಚನ್ನಕೇಶವ

Previous Post Next Post

Contact Form

f="https://unpkg.com/video.js/dist/video-js.css" rel="stylesheet">