Actor Sudeep : ನಾಳೆ ಯಲಬುರ್ಗಾಕ್ಕೆ ಕಿಚ್ಚ ಸುದೀಪ್ ಆಗಮನ, ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಪ್ರಚಾರ


ನಾಳೆ ಯಲಬುರ್ಗಾಕ್ಕೆ ಕಿಚ್ಚ ಸುದೀಪ್ ಆಗಮನ, ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಪ್ರಚಾರ 

ಯಲಬುರ್ಗಾ :  ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಪ್ರಚಾರ ಮಾಡಲು ಸ್ಯಾಂಡಲ್ ವುಡ್ ಸ್ಟಾರ್, ಖ್ಯಾತ ನಟ ಕಿಚ್ಚ ಸುದೀಪ್ ಅವರು ನಾಳೆ ಯಲಬುರ್ಗಾ ತಾಲೂಕಿನ ಬೇವೂರಗೆ ಬರಲಿದ್ದು ಚುನಾವಣೆ ಪ್ರಚಾರ ಕಣ ಮತ್ತಷ್ಟು ರಂಗೇರಲಿದೆ.

ತಾಲೂಕಿನ  ಬೇವೂರು ಗ್ರಾಮದಲ್ಲಿ ನಾಳೆ ದಿನಾಂಕ 3 ರಂದು ಬುಧವಾರ ಸಂಜೆ ನಡೆಯುವ ರೋಡ್ ಶೋ, ಪ್ರಚಾರ ಸಭೆಯಲ್ಲಿ  ಬಿಜೆಪಿ ಅಭ್ಯರ್ಥಿ ಸಚಿವ ಹಾಲಪ್ಪ ಪರ ಖ್ಯಾತ ನಟ ಕಿಚ್ಚ ಸುದೀಪ್, ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಭರ್ಜರಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ಮೂಲಕ  ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸಿದ್ದು ಉಬಯ ಪಕ್ಷದ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಬಂದು ಪ್ರಚಾರ ಮಾಡಿದ್ದಾರೆ, ಬಿಜೆಪಿ ಪರ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಪರ ಲಕ್ಷ್ಮಣ್ ಸವದಿ ಬಂದು ಭರ್ಜರಿ ಪ್ರಚಾರ ನಡೆಸಿದ್ದಾರೆ.

ನಾಳೆ ಸ್ಯಾಂಡಲ್ ವುಡ್  ನಟ ಕಿಚ್ಚ ಸುದೀಪ್  ಮತ್ತು ಚಲುವಾದಿ ನಾರಾಯಣ ಸ್ವಾಮಿ ಅವರು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಬೇವೂರು ನಲ್ಲಿ ಸಂಜೆ 4 ನಾಲ್ಕು ಗಂಟೆಗೆ ರೋಡ್ ಶೋ ಮತ್ತು ಬಹಿರಂಗ ಪ್ರಚಾರ ಕಾರ್ಯಕ್ರಮವನ್ನು ಬಿಜೆಪಿ ಮಂಡಲ ಹಮ್ಮಿಕೊಂಡಿದ್ದು ನಟ ಸುದೀಪ್ ಮತ್ತು ಕೇಂದ್ರ ಸಚಿವ ಚಲುವಾದಿ ನಾರಾಯಣ ಸ್ವಾಮಿ ಭಾಗವಹಿಸಲಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">