Kushtagi : ಮನ್ನೆರಾಳ ಗ್ರಾಮದ ಕೆರೆ ಅಂಗಳದಲ್ಲಿ ಮೊಳಗಿದ ಕಾರ್ಮಿಕ ದಿನಾಚರಣೆ


ಮನ್ನೆರಾಳ ಗ್ರಾಮದ ಕೆರೆ ಅಂಗಳದಲ್ಲಿ ಮೊಳಗಿದ ಕಾರ್ಮಿಕ ದಿನಾಚರಣೆ

*ಪಿಡಿಓ ನಿಂಗಪ್ಪ ಮೂಲಿಮನಿ ರವರು ಹಿರಿಯ ಕೂಲಿ ಕಾರ್ಮಿಕೆ ನೀಲಮ್ಮ ಗೆ ಕೇಕ್ ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

*ಕಾರ್ಮಿಕ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಸವಿದ ನರೇಗಾ ಕೂಲಿಕಾರರರು

ಕೊಪ್ಪಳ ಜಿಲ್ಲೆಯ ,ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನ್ನೆರಾಳ ಗ್ರಾಮದ  ಕೂಲಿಕಾರರಿಗೆ *ನರೇಗಾದಡಿ  ಕೆರೆ ಹೂಳೆತ್ತುವ* ಕೆಲಸ ನೀಡಲಾಗಿದ್ದು. ಸ್ಥಳದಲ್ಲಿ ಇಂದು *ಕಾರ್ಮಿಕರ ದಿನ* ಆಚರಿಸುವ ಮೂಲಕ ಸಂಭ್ರಮಿಸಿದರು.

ಈ ಕಾರ್ಯಕ್ರಮ ಉದೇಶಿಸಿ *ಪಿಡಿಓ ನಿಂಗಪ್ಪ ಮೂಲಿಮನಿ* ರವರು ಮಾತನಾಡಿ ಇಂದು ಕಾರ್ಮಿಕ ದಿನಾಚರಣೆ ಮಾಡುತ್ತಿರುವುದು ಅತ್ಯಂತ ಸಂತೋಷಕರವಾಗಿದೆ. ಇಲ್ಲಿ ಪ್ರತಿಯೊಬ್ಬರೂ ಕೂಲಿ ಕಾರ್ಮಿಕರೇ ಪ್ರತಿಯೊಬ್ಬರಿಗೆ ಕೊಟ್ಟಂತ ಜವಾಬ್ದಾರಿಯನ್ನು ನಿರ್ವಹಿಸಿ ಕೂಲಿ ಪಡೆದುಕೊಳ್ಳುವಂತೆ ವ್ಯವಸ್ಥೆ ಇದ್ದು ಪ್ರತಿಯೊಬ್ಬರು ಕೆಲಸದಲ್ಲಿ ಮೇಲು ಕೀಳು ಎಂಬ ಕೀಳುರುಮೆ  ಮರೆತು ನಾವೆಲ್ಲ ಒಂದೇ ಅನ್ನೋ ಭಾವನೆಯಿಂದ ಸಂತೋಷದಿಂದ ಕೆಲಸ ನಿರ್ವಹಿಸಬೇಕು ಹಾಗೂ ನಾವೆಲ್ಲ ಒಂದೇ ಅನ್ನೋ ಭಾವನೆ ಪ್ರತಿಯೊಬ್ಬರಲ್ಲಿ ಇರಬೇಕೆಂಬುದು ತುಂಬಾ ಮುಖ್ಯ ಹಾಗೂ ಇದೇ ತರ ನಾವು ನೀವೆಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸೋಣ ಎಂದು ಹೇಳಿದರು.

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚನ್ನಮ್ಮ ಕಂಬಳಿ ಗ್ರಾ.ಪಂ ಸಿಬ್ಬಂದಿಗಳಾದ ಚಂದ್ರನಗೌಡ , ರಮೇಶ್ , ಮಹಾಂತೇಶ್ ದೇಶಟ್ಟಿ , ಗ್ರಾಮ ಕಾಯಕ ಮಿತ್ರರಾದ ಮಂಜುಳಾ , ಕಾಯಕ ಬಂಧುಗಳಾದ ರೇಣುಕಾ,ಸರೋಜಾ,ರೇಣುಕಾ ಪಾಲಕರ್,ದೇವಮ್ಮ,ಹುಲಪ್ಪ ಹಾಗೂ ೯೫೦ ಕೂಲಿಕಾರರರು ಇದ್ದರು. ಐ ಇ ಸಿ ಸಂಯೋಜಕರು ಇನ್ನೂ ಅನೇಕ ಪ್ರಮುಖರು ಭಾಗವಹಿಸಿದ್ದರು.

 ಶ್ರವಣಕುಮಾರ್ ಅಂಗಡಿ ಸಿದ್ದಿ ಟಿವಿ ಕುಷ್ಟಗಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">