Bigboss: ನಾಳೆ ಕುಷ್ಟಗಿ ನಗರಕ್ಕೆ ನಟ ಸುದೀಪ್ ಆಗಮನ


ನಾಳೆ ಕುಷ್ಟಗಿ ನಗರಕ್ಕೆ ನಟ ಸುದೀಪ್ ಆಗಮನ

 ಕುಷ್ಟಗಿ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ದೊಡ್ಡನಗೌಡ ಪಾಟೀಲ್ ಪರ ಖ್ಯಾತ ನಟ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಾಳೆ ಕುಷ್ಟಗಿ ನಗರಕ್ಕೆ ಆಗಮಸಲಿದ್ದು ಕುಷ್ಟಗಿ ಚುನಾವಣಾ ಅಖಾಡ ಮತ್ತಷ್ಟು ರಂಗೇರಲಿದೆ.

ಕುಷ್ಟಗಿ ಮತಕ್ಷೇತ್ರದಲ್ಲಿ ದಿನಾಂಕ 03/05/2023 ಬುಧವಾರ ಮಧ್ಯಾಹ್ನ 3 ಗಂಟೆಗೆ ಬಿಜೆಪಿಯ  ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಪರ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಕುಷ್ಟಗಿಯಲ್ಲಿ ರೋಡ್ ಸೋ ಮೂಲಕ ಭರ್ಜರಿ ಪ್ರಚಾರ ಮಾಡುವದರ ಜೊತೆಗೆ ಬಿಜೆಪಿ ಪಕ್ಷಕ್ಕೆ ಮತಯಾಚನೆ ಮಾಡಲಿದ್ದಾರೆ.

ಕುಷ್ಟಗಿ ಕ್ಷೇತ್ರದ ಹನಮಸಾಗರದಲ್ಲಿ ನಿನ್ನೆ ದಿನಾ ಕಾಂಗ್ರೇಸ್ ಪಕ್ಷದ ಪರ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಚಾರ ಮಾಡಿದ್ದಾರೆ ಅದರ ಬೆನ್ನಲ್ಲಿ ನಾಳೆ ದಿನಾ ಕಿಚ್ಚ ಸುದೀಪ್ ಅವರು ಕುಷ್ಟಗಿಗೆ ಬರುವುದರಿಂದ ಬಿಜೆಪಿಗೆ ಮತಷ್ಟು ಪುಷ್ಟಿ ತಂದಂತಾಗಿದೆ.

ಶ್ರವಣ ಅಂಗಡಿ ಸಿದ್ದಿ ಟಿವಿ ಕುಷ್ಟಗಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">