BJP : ನಾವು ಬಿಜೆಪಿಗೆ ಬೆಂಬಲಿಸುತ್ತೆವೆ : ಸಿಂಧನೂರು 19ವಾರ್ಡ್ ಮಹಿಳೆಯರು

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಿಂಧನೂರು ನಗರದ 19 ನೇ ವಾರ್ಡಿನ ಮಹಿಳೆಯರು ಇಂದು ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯಕ್ಕೆ ಆಗಮಿಸಿ ಇಲ್ಲಿಯವರೆಗೂ ಆದಂತಹ MLA ಗಳು ಯಾರು ನಮಗೆ ಯಾವುದೇ ಅನುಕೂಲ ಮಾಡಿ ಕೊಟ್ಟಿಲ್ಲ ಮುಖ್ಯವಾಗಿ ನಮಗೆ ಮನೆ ಇಲ್ಲ ನಾವು ಬಹಳಷ್ಟು ಬಾರಿ ಹಾಲಿ ಹಾಗೂ ಮಾಜಿ ಶಾಸಕರುಗಳಿಗೆ ಕೇಳಿದರೂ ಯಾವುದೇ ಅನುಕೂಲ ಮಾಡಿ ಕೊಟ್ಟಿಲ್ಲ ಆದ್ದರಿಂದ ಈ ಬಾರಿಯ ಚುನಾವಣೆ ಗೆ ನಾವು ಸ್ವ ಇಚ್ಛೆಯಿಂದ ಬಿಜೆಪಿ ಬೆಂಬಲಿಸುತ್ತೇವೆ ನಮಗೆ ಅನುಕೂಲ ಮಾಡಿಕೊಡಿ ಎಂದು ನಮ್ಮ ಮುಖಂಡರಾದ ಕೊಲ್ಲಾ ಶೇಷಗಿರಿರಾವ್ ತುಂಗಭದ್ರಾ ಕಾಡಾ ಅಧ್ಯಕ್ಷರಲ್ಲಿ ವಿನಂತಿಸಿಕೊಂಡರು ಅವರು ಮಾತನಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ಈ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಕೆ.ಕರಿಯಪ್ಪನವರನ್ನು ಗೆಲ್ಲಿಸಿ ನಿಮ್ಮೆಲ್ಲ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ್ ಹಾಗೂ  ಲಿಂಗರಾಜ್ ಹೂಗಾರ್ ಗೊರೆಬಾಳ ಸಿದ್ದರಾಮೇಶ್ ಮನ್ನಾಪುರ್ ಮುಂತಾದವರು ಉಪಸ್ಥಿತರಿದ್ದರು.

ವರದಿ: ಅಲಂಭಾಷಾ

Previous Post Next Post

Contact Form

f="https://unpkg.com/video.js/dist/video-js.css" rel="stylesheet">