Gangavathi : ಸಂಗಾಪುರದಲ್ಲಿ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ


ಆರೋಗ್ಯದ ಕಡೆ ಗಮನಹರಿಸಿ

ತಾಪಂ ಇಓ ಮಹಾಂತಗೌಡ ಪಾಟೀಲ್ ಸಲಹೆ

 ಸಂಗಾಪುರದಲ್ಲಿ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ

ಗಂಗಾವತಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಎಲ್ಲ ಕೂಲಿಕಾರರು ಆರೋಗ್ಯದ ಕಡೆಯೂ ಗಮನಹರಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಹೇಳಿದರು.

ತಾಲೂಕಿನ ಸಂಗಾಪುರ ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣ ಕೆರೆ ಹೂಳೆತ್ತುವ ಕಾಮಗಾರಿಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೂಲಿಕಾರರಿಗೆ ಅನುಕೂಲ ಆಗಲೆಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕಾಮಗಾರಿ ಸ್ಥಳದಲ್ಲೇ ಆರೋಗ್ಯ ಶಿಬಿರ ಆಯೋಜಿಸುತ್ತಿದೆ. ಸ್ವಯಂ ಪ್ರೇರಿತರಾಗಿ ಪಾಳ್ಗೊಂಡು ಶಿಬಿರದ ಲಾಭ ಪಡೆದುಕೊಳ್ಳಬೇಕು. ಯಾರೂ ಕೂಡ ತಪಾಸಣೆ ಮಾಡಿಕೊಳ್ಳಲು ಹಿಂದೇಟು ಹಾಕಬಾರದು ಎಂದರು.

ಶಿಬಿರದಲ್ಲಿ ಬಿ.ಪಿ., ಶುಗರ್, ಕ್ಷಯ ಸೇರಿ ಇತರೆ ರೋಗಗಳ ಉಚಿತ ತಪಾಸಣೆ ಮಾಡಲಾಗುತ್ತಿದೆ. ಎಲ್ಲ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಗುರುತರ ರೋಗಗಳು ಇದ್ದರೆ ವೈದ್ಯರ ಸಲಹೆಗಳನ್ನು ಪಾಲನೆ ಮಾಡಬೇಕು ಎಂದರು.

ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಆಸ್ತಿಗಳ ಸೃಜನೆಯಾಗುತ್ತಿವೆ. ಶಾಲಾ ಕಾಮಗಾರಿಗಳು, ಫಲಾನುಭವಿಗಳಿಗೆ ಜಾನುವಾರು, ಕುರಿ, ಕೋಳಿ ಶೆಡ್ ನಿರ್ಮಿಸಿಕೊಳ್ಳಲು ನರೇಗಾದಡಿ ಅವಕಾಶ ಇದೆ. ಅರ್ಹ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಸಂಗಾಪುರ ಗ್ರಾಪಂ ಪಿಡಿಓ ನಾಗೇಶ ಕುರ್ಡಿ ಅವರು ಮಾತನಾಡಿ, ವಿವಿಧ ರೋಗಗಳ ತಪಾಸಣೆ ಜೊತೆಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಬೇಸಿಗೆ ದಿನಗಳಲ್ಲಿ ಕೂಲಿಕಾರರು ಹೆಚ್ಚು ನೀರು ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.

ಸಂಗಾಪುರ ಪಿಎಚ್ ಸಿ ಆರೋಗ್ಯ ಅಧಿಕಾರಿಗಳಾದ ಡಾ.ಸಂತೋಷ ಅವರು ಮಾತನಾಡಿ, ಹವಮಾನ ವೈಪರಿತ್ಯಕ್ಕೆ ನಾವೇ ಕಾರಣರಾಗಿದ್ದೇವೆ. ಪ್ರತಿಯೊಬ್ಬರೂ ಪರಿಸರ ಉಳಿವಿಗೆ ಮುಂದಾಗಬೇಕು. ಗಿಡ ಮರಗಳ ಸಂಖ್ಯೆ ಹೆಚ್ಚಾದರೆ ಬಿಸಿಲಿನ ಪ್ರಖರತೆ ಕಡಿಮೆ ಆಗುತ್ತದೆ ಎಂದರು. ಆರೋಗ್ಯ ಶಿಬಿರದಲ್ಲಿ 135 ಜನರ ತಪಾಸಣೆ ಮಾಡಲಾಯಿತು.

ಗ್ರಾಪಂ ಅಧ್ಯಕ್ಷರಾದ ಹರೀಶ ಘಂಟಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಾಪಂ ಎಸ್ ಬಿಎಂ ವಿಷಯ ನಿರ್ವಾಹಕರಾದ ಭೀಮಣ್ಣ ನಾಯಕ, ಗ್ರಾಪಂ ಸದಸ್ಯರಾದ ಹೇಮಣ್ಣ, ಲಕ್ಷ್ಮಮ್ಮ, ಹಿರಿಯ ಆರೋಗ್ಯ ಸಹಾಯಕರಾದ ವೆಂಕಟೇಶ, ಗ್ರಾಪಂ ಸಿಬ್ಬಂದಿಗಳು, ಕೆಎಚ್ ಪಿಟಿ ಸ್ಚಯಂ ಸೇವಕರು, ಅಂಗನವಾಡಿಮ ಅಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು ಇದ್ದರು.

ವರದಿ : ಚನ್ನಕೇಶವ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">