CM ಸಿದ್ದರಾಮಯ್ಯ, ಶಾಸಕ ಹಿಟ್ನಾಳ ಗೆಲುವಿನ ಹರಕೆ ತೀರಿಸಿದ ಕಿಶೋರಿ ಬೂದನೂರು


CM ಸಿದ್ದರಾಮಯ್ಯ, ಶಾಸಕ ಹಿಟ್ನಾಳ ಗೆಲುವಿನ ಹರಕೆ ತೀರಿಸಿದ ಕಿಶೋರಿ ಬೂದನೂರು.

ಕೊಪ್ಪಳ,:  ಮಹಿಳಾ ಉದ್ಯಮಿ ಹಾಗೂ ಮಹಿಳಾ ಕಾಂಗ್ರೇಸ್ ರಾಜ್ಯ ಉಪಾಧ್ಯಕ್ಷರಾದ ಕಿಶೋರಿ ಬೂದನೂರು ಅವರುಕೊಪ್ಪಳ ನಗರದ 18ನೇ ವಾರ್ಡಿನ ಕಲ್ಲಣ್ಣನವರ ಓಣಿಯ ಹುಲಿಗೆಮ್ಮ ದೇವಿಗೆ 101 ತೆಂಗಿನಕಾಯಿ ಹರಕೆ ಖರೀದಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವರಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಗೆದ್ದು ಮುಖ್ಯಮಂತ್ರಿಯಾಗಬೇಕು. ಕೊಪ್ಪಳ ಕ್ಷೇತ್ರದಲ್ಲಿ ಕೆ.ರಾಘವೇಂದ್ರ ಹಿಟ್ನಾಳ ಅವರು ಗೆದ್ದು ಹ್ಯಾಟ್ರಿಕ್ ಭಾರಿಸಬೇಕು ಎಂದು ಕಿಶೋರಿ ಬೂದನೂರು ಅವರು ಮತಯಾಚನೆ ಸಂದರ್ಭದಲ್ಲಿ ಹರಕೆ ಹೊತ್ತಿದ್ದರಂತೆ ಅದರಂತೆ ಕೊಪ್ಪಳದಲ್ಲಿ ಬಾರೀ ಪೈಪೋಟಿ ಮಧ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಗೆಲುವು ಸಾಧಿಸಿ ಮೂರನೇ ಬಾರಿ ಶಾಸಕರಾಗಿದ್ದಾರೆ.  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ನಗರದ ಹುಲಿಗೆಮ್ಮ ದೇವಿಗೆ 101 ತೆಂಗಿನಕಾಯಿ ಹರಕೆ ತೀರಿಸಿದ್ದಾರೆ. ಇದೇ ವೇಳೆ  ಕಿಶೋರಿ ಬೂದನೂರು ಮಾತನಾಡಿ, ಚುನಾವಣೆ ಮತಯಾಚನೆ ಸಮಯದಲ್ಲಿ ದೇವಿಯ ದಿವ್ಯಶಕ್ತಿ ನನಗೆ ಆಕರ್ಷಣೆಯಾಗಿತ್ತು ಹಾಗಾಗಿ  ಕೆ.ರಾಘವೇಂದ್ರ ಹಿಟ್ನಾಳ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದೆ, ಈಗ  ಹರಕೆ ತೀರಿಸಿದ್ದೇನೆ. ಮುಂದಿನ ದಿನಗಳಲ್ಲಿ ಶಾಸಕರು ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಂಜುಳಾ ಉಂಡಿ, ರೇಖಾ ಬಿಜಾಪುರ, ಕೌಶಲ್ ಚೋಪ್ರಾ, ಅರುಣ್, ಮಂಜು, ಬಸವರಾಜ, ಹುಲಿಗೆಮ್ಮ ಸೇರಿದಂತೆ ಅನೇಕರು ಇದ್ದರು.

ವರದಿ : ಶಿವಕುಮಾರ ಹಿರೇಮಠ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">