ಕುಕನೂರ್ ನಲ್ಲಿ ಜೆಪಿ ನಡ್ದಾ ಅಬ್ಬರದ ಪ್ರಚಾರ.
ಕಾಂಗ್ರೆಸ್ ನಾಯಕರು ಅರ್ಧ ಜೈಲ್, ಅರ್ಧ ಬೇಲ್ ಮೇಲೆ.
ಕಾಂಗ್ರೆಸ್ ವಿರುದ್ಧ ಜೆಪಿ ನಡ್ದಾ ಕೆಂಡಾಮಂಡಲ.
ಕುಕನೂರು : ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರು ಇವತ್ತು ಅರ್ಧ ನಾಯಕರು ಜೈಲ್ ಗೆ ಹೋದವರು, ಇನ್ನರ್ದ ನಾಯಕರು ಬೇಲ್ ಮೇಲೆ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ ಪಿ ನಡ್ದಾ ಕೆಂಡ ಕಾರಿದ್ದಾರೆ.
ಕುಕನೂರು ಪಟ್ಟಣದ ಗುರುಕುಲ ಕಾಲೇಜು ಪಕ್ಕದ ಜಾಗೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜೆ ಪಿ ನಡ್ದಾ, ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದರು.
ಕಾಂಗ್ರೆಸ್ ಪಕ್ಷದ ಅರ್ಧ ನಾಯಕರು ಜೈಲ್ ಗೆ ಹೋದವರು, ಅರ್ಧ ನಾಯಕರು ಬೇಲ್ ಮೇಲೆ ಇದ್ದಾರೆ ಇವರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ರಿದ್ದಾರೆ, ಅದೇ ಡಿ ಕೆ ಶಿವಕುಮಾರ್ ಇವತ್ತು ಬೇಲ್ ಮೇಲೆ ಹೊರಗಿದ್ದಾರೆ,ಸಿಬಿಐ ನಲ್ಲಿ ಕೇಸ್ ನಡೀತಿದೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ ಕೆ ಶಿ ಬೇಲ್ ಮೇಲೆ ಇದ್ದಾರೆ,ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಜೆಪಿ ನಡ್ದಾ ವಾಗ್ದಾಳಿ ನಡೆಸಿದರು.
40 % ಬಿಜೆಪಿ ಸರ್ಕಾರ ಎಂದು ಟಿಕೀಸುವ ಕಾಂಗ್ರೆಸ್ ಪಕ್ಷಕ್ಕೆ ಜೆಪಿ ನಡ್ದಾ ತಿರುಗೇಟು ಕೊಟ್ಟಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ಅನೇಕ ಭ್ರಷ್ಟಾಚಾರ ಪ್ರಕರಣ ನಡೆದಿವೆ ಅವೆಲ್ಲವನ್ನು ಮುಚ್ಚಿಹಾಕಲಾಗಿದೆ.
2014 ರಲ್ಲಿ ಶಿಕ್ಷಕರ ನೇಮಕಾತಿ ಹಗರಣ,2015 ಅರ್ಕಾವತಿ ಡಿ ನೋಟಿಫಿಕೇಟಿನ್ ಹಗರಣ ಮಾಡಿ ಎಂಟು ಸಾವಿರ ರೈತರ ಜಮೀನು ಕಬಳಿಕೆ ಮಾಡಲಾಗಿದೆ,2016 ರಲ್ಲಿ 400 ಕೋಟಿ ಮೊತ್ತದ ಮಲಪ್ರಭಾ ಕಾಲುವೆ ಹಗರಣ ನಡೆದಿದೆ,2017 ರಲ್ಲಿ 57 ಕೋಟಿ ಮೊತ್ತದ ಫ್ಲೈ ಓವರ್ ಹಗರಣ, 2017 ರಲ್ಲಿ 447 ಕೋಟಿ ರೂ ಕೆ ಪಿ ಟಿ ಸಿ ಎಲ್ ಹಗರಣ,250 ಕೋಟಿ ಮೊತ್ತದ ಕೊಳಚೆ ನಿರ್ಮೂಲನೆ ಮಂಡಳಿ ಹಗರಣ, ಬಿಬಿಎಂಪಿ ನೀರು ಸರಬರಾಜು ಹಗರಣ ಹೀಗೆ ಹಲವಾರು ಹಗರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿವೆ ಎಂದು ಜೆಪಿ ನಡ್ದಾ ಕಾಂಗ್ರೆಸ್ ಆಡಳಿತ ಹಗರಣಗಳನ್ನು ಪಟ್ಟಿ ಮಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮರೆಮಾಚಿದರು ಎಂದರು, ಪಿ ಎಫ್ ಐ ಬ್ಯಾನ್ ಮಾಡಿದ್ದು ಮೋದಿ, ಅಮಿತ್ ಶಾ, ಆದರೆ ಸಿದ್ದರಾಮಯ್ಯ ಆಡಳಿತದಲ್ಲಿ 175 ಪಿ ಎಫ್ ಐ ಪ್ರಕರಣ ವಾಪಾಸ್ ಪಡೆಯುಲಾಯಿತು, ದೇಶದ್ರೋಹಿಗಳಿಗೆ ನೇರವಾದ ಸಿದ್ದರಾಮಯ್ಯ ಕರ್ನಾಟಕದ ಕ್ಷೇಮೆ ಕೇಳಬೇಕು ಎಂದು ಜೆಪಿ ನಡ್ದಾ ಗುಡುಗಿದರು.
ಕೇಂದ್ರದ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠವಾಗಿದೆ, ವಿಶ್ವದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಭಾರತ ಐದನೇ ಸ್ಥಾನದಲ್ಲಿ ಇದೆ, ನರೇಂದ್ರ ಮೋದಿ ಜಗದೇಕ ಮಲ್ಲ, ಜಗಪ್ರಸಿದ್ಧ ನಾಯಕ ಎಂದು ಜೆಪಿ ನಡ್ದಾ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ರಾಯರಡ್ಡಿ ಟೂರಿಸ್ಟ್ ಇದ್ದಂತೆ ಕ್ಷೇತ್ರಕ್ಕೆ ಮೂರು ತಿಂಗಳು, ಆರು ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ, ಅಂತವರನ್ನು ಮನೆಗೆ ಕಳಿಸಿ ಹಾಲಪ್ಪ ಆಚಾರ್ ಅವರನ್ನು ಗೆಲ್ಲಿಸಿ ಎಂದರು.
ಸಚಿವ ಹಾಲಪ್ಪ ಆಚಾರ್. ಮಾತನಾಡಿ, ನೀರಾವರಿ, ಶಿಕ್ಷಧ ಕನಸು ಸಾಕಾರವಾಗಿದೆ, ಹೆಚ್ಚಿನ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪ, ಎಂ ಎಲ್ ಸಿ ಹೇಮಲತಾ ನಾಯಕ್, ಚುನಾವಣೆ ಉಸ್ತುವಾರಿ ಅಜಯ್ ಕುಮಾರ್ ಮಾವರ, ಪವನ್ ಕುಮಾರ್, ರೆಡ್ಡಿ, ಗುಜರಾತ್ ಒಬಿಸಿ ಉಸ್ತುವಾರಿ ಮಾಯಾಂಕ್, ಸಿ ಎಸ್ ಪೊಲೀಸ್ ಪಾಟೀಲ್, ಸುಧಾಕರ್ ದೇಸಾಯಿ, ಶಕುಂತಲಾ ಮಾಲಿ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಶಿವಲೀಲಾ ದಳವಾಯಿ, ಬಸನಗೌಡ ತೊಂಡಿಹಾಳ್ ಸೇರಿದಂತೆ ಇತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ