Kampli : ಶಾಸಕ ಗಣೇಶಗೆ 51 ಸಾವಿರ ರೂ.ಗಳ ದೇಣಿಗೆ ನೀಡಿದ ದಲಿತ ಮಹಿಳೆ

ಶಾಸಕ ಗಣೇಶಗೆ 51 ಸಾವಿರ ರೂ.ಗಳ ದೇಣಿಗೆ ನೀಡಿದ ಮಹಿಳೆ

ಕಂಪ್ಲಿ :  ಪಟ್ಟಣದ ತಮ್ಮ ನಿವಾಸದಲ್ಲಿ ದಲಿತ ಮಹಿಳೆ ಅಂಡಿ ಹುಲಿಗೆಮ್ಮ ಡಾ.ಎ.ಸಿ.ದಾನಪ್ಪ ದಂಪತಿ ಅವರು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜೆ.ಎನ್.ಗಣೇಶ್ ಅವರಿಗೆ 51 ಸಾವಿರ ರೂ.ಗಳ ದೇಣಿಗೆ ಶುಕ್ರವಾರ ನೀಡಿದರು.

ನಂತರ ಡಾ.ಎ.ಸಿ.ದಾನಪ್ಪ ಮಾತನಾಡಿ, ಕಳೆದ ಐದು ವರ್ಷದಲ್ಲಿ ಸಾಕಷ್ಟು ಅನುದಾನ ತಂದು, ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಗಣೇಶ ಶ್ರಮಿಸಿದ್ದಾರೆ. ಕ್ಷೇತ್ರದ ಜನರ ಮನೆ ಮಗನಾಗಿ ಕೆಲಸ ಮಾಡಿದ್ದು, ಮತ್ತೊಮ್ಮೆ ಅವರನ್ನು ಶಾಸಕರನ್ನಾಗಿ ಗಣೇಶ್ ಗೆಲ್ಲಿಸಲು ಮತದಾರರು ಕಂಕಣ ಬದ್ಧರಾಗಿದ್ದಾರೆ. ಕ್ಷೇತ್ರದ ಮೂಲೆ ಮೂಲೆಯಲ್ಲೂ ಗಣೇಶನದ್ದೇ ಹವಾ ಇದೆ. ಚುನಾವಣೆಯಲ್ಲಿ ಕಂಪ್ಲಿ ವಿಧಾನಸಭಾ ಗೆದ್ದು ಬರಲೆಂದು ಗಣೇಶ್ ಅವರಿಗೆ ನಮ್ಮ ಧರ್ಮಪತ್ನಿ ಶ್ರೀಮತಿ ಅಚಿಡಿ ಹುಲಿಗೆಮ್ಮ ದಾನಪ್ಪ ಅವರು 51 ಸಾವಿರ ರೂ. ಗಳ ದೇಣಿಕೆ ನೀಡಿದ್ದು, ಜನರ ಸೇವಾ ಕಾರ್ಯಕ್ಕೆ ಬಳಕೆ ಮಾಡಲಿದ್ದಾರೆ. ಈ ಬಾರಿ ಮತ್ತೊಮ್ಮೆ ಗಣೇಶ ಗೆಲ್ಲುವುದು ಖಚಿತ ಮತ್ತು ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಮನೋಜ್ ಕುಮಾರ್ ದಾನಪ್ಪ, ಅಂಡಿ ಲಲಿತಾಂಭೆ, ಗೋಪಾಲ ಕೃಷ್ಣ, ಮೌಲಾ, ಸಿ ಕನಕ, ಗಣೇಶ್, ನಾಗರಾಜ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಬ್ಯೂರೋ ರಿಪೋರ್ಟ್, ರಘುವೀರ್ ಸಿದ್ದಿ, Siddi Tv, ಕಂಪ್ಲಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">