Koppal : ದಲಿತ ಶಾಸಕರಿಗೆ ಸಿಎಂ ಸ್ಥಾನಕ್ಕೆ ಒತ್ತಾಯ


ದಲಿತ ಶಾಸಕರಿಗೆ ಸಿಎಂ ಸ್ಥಾನಕ್ಕೆ ಒತ್ತಾಯ

ಕೊಪ್ಪಳ,: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ. ಒಬ್ಬ ದಲಿತ ಮುಖ್ಯಮಂತ್ರಿ ಆಗಿಲ್ಲ. ಬಹುತೇಕ ಹಿಂದುಳಿದ ವರ್ಗದವರು ಸೇರಿದಂತೆ ಒಟ್ಟಾರೆ ಅನೇಕ 23 ಜ‌ನ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಬಹುತೇಕ ಜನಸಂಖ್ಯೆಯುಳ್ಳ ದಲಿತ ಸಮುದಾಯಕ್ಕೆ ಇದುವರೆಗೂ ರಾಜ್ಯದ ಮುಖ್ಯಮಂತ್ರಿ ಅವಕಾಶ ನೀಡಿಲ್ಲ. ಈಗ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. 

ದಲಿತ ಸಮುದಾಯದ ಶಾಸಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕೊಪ್ಪಳ ದಲಿತ ಸಮುದಾಯದ ಮುಖಂಡರಾದ ರಾಘು ಚಾಕ್ರಿ, ಮಾರ್ಕೆಂಡಪ್ಪ ಬೆಲ್ಲದ್, ಗೌತಮ್ ಬಳಗಾನೂರ್, ಆನಂದ್ ಬೆಲ್ಲದ್, ಮಂಜು ದೊಡ್ಡಮನಿ ಒತ್ತಾಯಿಸಿದ್ದಾರೆ.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಲಿತ ಸಮುದಾಯದ ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಿಜವಾಗಿಯೂ ಅಹಿಂದ ನಾಯಕರು ಜಾತ್ಯಾತೀತ ನಾಯಕರು ಇರುವುದು ಸತ್ಯವಾದರೆ ದಲಿತ ಶಾಸಕರನ್ನು ಮುಖ್ಯಮಂತ್ರಿ ಮಾಡಿ ಸಾಬೀತು ಮಾಡಲಿ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಬಹುಮತದ ಈ ಸಾಧನೆಗೆ 

ದಲಿತ ಸಮುದಾಯದವರ ಕೊಡುಗೆ ಅಪಾರವಾಗಿದೆ. ಹೀಗಾಗಿ ದಲಿತ ಸಮುದಾಯದಿಂದ ಆಯ್ಕೆಯಾದ ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಬೇಕು. ಇದು ರಾಜ್ಯದ ಎಲ್ಲ ದಲಿತ ಸಮುದಾಯದವರ ಬೇಡಿಕೆಯಾಗಿದೆ ಎಂದು ಕೊಪ್ಪಳ ದಲಿತ ಸಮುದಾಯದ ಮುಖಂಡರಾದ ರಾಘು ಚಾಕ್ರಿ, ಮಾರ್ಕೆಂಡಪ್ಪ ಬೆಲ್ಲದ್, ಗೌತಮ್ ಬಳಗಾನೂರ್, ಆನಂದ್ ಬೆಲ್ಲದ್, ಮಂಜು ದೊಡ್ಡಮನಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">