Pavagad: ಜೆಡಿಎಸ್ ಪಕ್ಷವನ್ನು ನಂಬಿ ಮತ ಹಾಕಿದ 71,000 ಮತದಾರರಿಗೆ ತುಂಬು ಹೃದಯದ ಧನ್ಯವಾದಗಳು : ಮಾಜಿ ಶಾಸಕ

ಪಾವಗಡ:- ಜೆಡಿಎಸ್ ಪಕ್ಷವನ್ನು ನಂಬಿ ಮತ ಹಾಕಿದ 71,000 ಮತದಾರರಿಗೆ ತುಂಬು ಹೃದಯದ ಧನ್ಯವಾದಗಳು, ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಬೆಂಬಲವಿದೆ ದ್ವೇಷದ ರಾಜಕೀಯ ಬೇಡ ಎಂದ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ.

ಸೋಮವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಈ ಕ್ಷೇತ್ರದ ಮತದಾರರ ತೀರ್ಪನ್ನು ಸ್ವಾಗತಿಸುತ್ತೇನೆ,

ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು   ಪಕ್ಷದ ಪ್ರಣಾಳಿಕೆಯನ್ನು ತಾಲೂಕಿನ ಜನರ ಮನೆಮನೆಗೆ ತಿಳಿಸುವ ಮೂಲಕ  ಶಿಸ್ತಿನ ಸಿಪಾಯಿಗಳಂತೆ ಕಾರ್ಯನಿರ್ವಹಿಸಿದರು, ಆದರೂ ಸಹ ಸೋತಿರುತ್ತೇವೆ, ಇನ್ನು ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಎದೆಗುಂದದೆ 

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಧೈರ್ಯದಿಂದ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸಬೇಕು, ನಿಮ್ಮ ಬೆಂಬಲಕ್ಕೆ ಸಾದಾ ಪಕ್ಷ ನಿಂತಿರುತ್ತದೆ,

ಇನ್ನು ನೂತನ ಶಾಸಕರು ದ್ವೇಷದ ರಾಜಕೀಯ ರಾಜಕೀಯ ಮಾಡದೆ ತಾಲೂಕಿನ ಅಭಿವೃದ್ಧಿಗಾಗಿ  ಶ್ರಮಿಸಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು..

ನಂತರ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್ ಸಿ ಅಂಜನಪ್ಪ ಜಿಲ್ಲೆಯಲ್ಲಿ ಆರು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ನಮಗಿತ್ತು ಆದರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮಹಿಳಾ ಮತದಾರರನ್ನು ಅವರ ಪಕ್ಷದ ಪರವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದೆ,  ಮುಂದಿನ ದಿನಗಳಲ್ಲಿ ಪಕ್ಷವನ್ನು ಜಿಲ್ಲಾದ್ಯಂತ ಒಗ್ಗೂಡಿಸಿ ಮುನ್ನಡೆಸಲು ತೀರ್ಮಾನಿಸಲಾಗಿದೆ.

ಚುನಾವಣೆಯ ಸಂದರ್ಭದಲ್ಲಿ ಸೋಲು ಗೆಲುವು ರಾಜಕೀಯ ಪಕ್ಷಕ್ಕೆ ಅನಿವಾರ್ಯ ಪಾವಗಡ ತಾಲೂಕಿನಲ್ಲಿ ನಮ್ಮ ಪಕ್ಷ ಗೆಲ್ಲುವ ವಿಶ್ವಾಸ ಹೆಚ್ಚಾಗಿತ್ತು 71,000ಕ್ಕೂ ಅಧಿಕ ಮತ ಪಡೆದು ಆದರೆ ಕೆಲವೊಂದು ವ್ಯತ್ಯಾಸಗಳಿಂದ ಸೋತಿರುತ್ತದೆ ಎಂದು ತಿಳಿಸಿದರು..


ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾಲೂಕು ಅಧ್ಯಕ್ಷ ಬಲರಾಮರೆಡ್ಡಿ, ಎಸ್ ಕೆ ರೆಡ್ಡಿ, ಎನ್.ಎ.ಈರಣ್ಣ, ಗೋವಿಂದ ಬಾಬು, ಶಿವಕುಮಾರ್, ಪಂಚಾಯಿತಿಯ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್,ಅಕ್ಲಪ್ಪ ನಾಯ್ಡು, ಗಂಗಾಧರ ನಾಯ್ಡು, ಈರಣ್ಣ, ವೆಂಕಟೇಶ್, ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು ,

ವರದಿ:- ಅನಿಲ್ ಯಾದವ್ ಪಾವಗಡ ತಾಲ್ಲೂಕು...

Previous Post Next Post

Contact Form

f="https://unpkg.com/video.js/dist/video-js.css" rel="stylesheet">