PMKisan KYC : ಕಿಸಾನ್ ಸಮ್ಮಾನ್ ಯೋಜನೆ ಇ-ಕೆವೈಸಿ ಗೆ ಜೂನ್ 30 ಕೊನೆ ದಿನ.


ಕಿಸಾನ್ ಸಮ್ಮಾನ್  ಯೋಜನೆ ಇ-ಕೆವೈಸಿ ಗೆ  ಜೂನ್ 30 ಕೊನೆ ದಿನ.

14ನೇ ಕಂತು ಜುಲೈನಲ್ಲಿ ಪಾವತಿ ಸಾಧ್ಯತೆ.

ಯಲಬುರ್ಗಾ   :  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮಾಡಿಸಲು   ಇದೇ ಜೂನ್ 30 ಕೊನೆಯ ದಿನವಾಗಿದ್ದು ರೈತರು ಜೂನ್ 30 ರೊಳಗೆ ಇ-ಕೆವೈಸಿ ಮಾಡಿಸಲು ಕೃಷಿ ಇಲಾಖೆ ರೈತರಿಗೆ ಸೂಚಿಸಿ ಪ್ರಕಟಣೆ ಹೊರಡಿಸಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಪ್ರೋತ್ಸಾಹ ಧನದ ಕಂತನ್ನು ಜುಲೈ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾವಣೆ ಆಗುವ ಸಾಧ್ಯತೆ ಇದ್ದು ಇ-ಕೆವೈಸಿ ಮಾಡಿಸಿರುವ ಮತ್ತು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಲಿಂಕ್ ಮಾಡಿರುವ ಪಲಾನುಭವಿಗಳಿಗೆ ಮಾತ್ರ ಕಿಸಾನ್ ಸಮ್ಮಾನ್ ಹಣ ಜಮೆ ಆಗಲಿದೆ,ಯಲಬುರ್ಗಾ, ಕುಕನೂರು ತಾಲೂಕು ವ್ಯಾಪ್ತಿಯ ಪಲಾನುಭವಿ ರೈತರು ಮಂಗಳೂರು, ಕುಕನೂರು, ಯಲಬುರ್ಗಾ, ಹಿರೇ ವಂಕಲಕುಂಟಾ  ರೈತ ಸಂಪರ್ಕ ಕೇಂದ್ರದಲ್ಲಿ 14927 ರೈತರ ಇ-ಕೆವೈಸಿ ಬಾಕಿ ಇದ್ದು ಇದೇ ಜೂನ್ 30ರೊಳಗೆ ಪೂರ್ಣಗೊಳಿಸಬೇಕಿದೆ.


ರಾಜ್ಯ ಸರ್ಕಾರ ಇ-ಕೆವೈಸಿಯಲ್ಲಿ ಮುಖ ದೃಡೀಕರಣ ( ಫೇಸ್ ಅತೆಂಟಿಕೆಷನ್ ) ತಂತ್ರಾಂಶ ಅಳವಡಿಸಿದೆ.  ಪಲಾನುಭವಿ ರೈತರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೆ ಸ್ಟೋರ್ ನಿಂದ ದೌನ್ಲೋಡ್ ಮಾಡಿಕೊಂಡು ಇ-ಕೆವೈಸಿ ಮಾಡಿಕೊಳ್ಳಬಹುದು. ಇಲ್ಲವೇ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಸೇವೆ ಪಡೆದುಕೊಂಡು ಇ-ಕೆವೈಸಿ ಮಾಡಿಕೊಳ್ಳುವಂತೆ ಯಲಬುರ್ಗಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ಪ್ರಾಣೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಈರಯ್ಯ ಕುರ್ತಕೋಟಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">