Turvihal : ಮುಸ್ಲಿಂ ಬಾಂಧವರಿಂದ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆ.


ಮುಸ್ಲಿಂ ಬಾಂಧವರಿಂದ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್  ಆಚರಣೆ.

ತುರ್ವಿಹಾಳ ಪಟ್ಟಣದಲ್ಲಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈದ್ ಉಲ್ ಅದಾ ಬಕ್ರೀದ್ ಹಬ್ಬವನ್ನು ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಸಂಭ್ರಮದಿಂದ ಆಚರಿಸಿದರು.

ಹಜರತ್ ಇಬ್ರಾಹಿಂ  ಅವರ ತ್ಯಾಗವನ್ನು ಈ ಬಕ್ರೀದ್ ಸಾಂಕೇತಿಕರಿಸುತ್ತದೆ, ಹೀಗಾಗಿ ಪ್ರವಾದಿ ಹಜರತ್ ಇಬ್ರಾಹಿಂ ಅವರ ಜೀವನ, ತತ್ವಗಳನ್ನು ಹಾಗೂ ಅವರಲ್ಲಿನ  ದೈವ ನಿಷ್ಠೆ ಹಾಗೂ ತ್ಯಾಗಗುಣದೊಂಧಿಗೆ ಬಕ್ರೀದ್ ಹಬ್ಬದ ಆಚರಣೆ ಮಾಡಲಾಗುತ್ತದೆ ಎಂದು  ಧರ್ಮ ಗುರುಗಳಾದ ಎಂ.ಡಿ ಜಹಿರುದ್ದಿನ್ ಸಾಬ್ ಖಾಜಿ ಹೇಳಿದರು. 

ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರ ಒಬ್ಬರನ್ನು ಒಬ್ಬರು ಅಪ್ಪಿಕೊಂಡು ಸಂಭ್ರಮವನ್ನು ಹಂಚಿಕೊಂಡರು.

ಪುಟಾಣಿಮಕ್ಕಳು, ಹಿರಿಯರು ವೃದ್ಧರು ಸೇರಿ ಪ್ರತಿಯೊಬ್ಬರು ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತುರುವಿಹಾಳ ಪೊಲೀಸ್ ಇಲಾಖೆ ಬಂದೋಬಸ್ತ್ ಕಲ್ಪಿಸಿದ್ದರು.

ರಿಪೋರ್ಟರ್ ಮೆಹಬೂಬ

Previous Post Next Post

Contact Form

f="https://unpkg.com/video.js/dist/video-js.css" rel="stylesheet">