Yalaburga : ಮಳೆಗಾಗಿ ಪ್ರಾರ್ಥಿಸಿ ತರಲಕಟ್ಟೆ ಗ್ರಾಮದಲ್ಲಿ ಗುರ್ಜಿ ಪೂಜೆ


ಮಳೆಗಾಗಿ ಪ್ರಾರ್ಥಿಸಿ  ತರಲಕಟ್ಟೆ ಗ್ರಾಮದಲ್ಲಿ ಗುರ್ಜಿ ಪೂಜೆ.

 ಯಲಬುರ್ಗಾ :  ಮುಂಗಾರು ಮಳೆಬಾರದೇ ರೈತರು ಚಿಂತೆಗೀಡಾಗಿದ್ದು ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಗುರ್ಜಿ ಪೂಜೆ ಮಾಡಿದರು.

ತರಲಕಟ್ಟಿ ಗ್ರಾಮದ ಮಂಜುನಾಥ್ ಗಡಾದ್, ಯುವಕರು, ರೈತರು ದುರ್ಗಾ ದೇವಿ ದೇವಸ್ಥಾನದಿಂದ ಗುರ್ಜಿ ಹೊತ್ತುಕೊಂಡು ಮನೆ ಮನೆಗೆ ತೆರಳಿ ಗ್ರಾಮೀಣ ಪ್ರದೇಶದ ಸಾಂಪ್ರದಾಯಕ ಗುರ್ಜಿ ಪೂಜೆ ಮಾಡಿದರು.

ಉತ್ತರ ಕರ್ನಾಟಕದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ ಮಾಡಿದರೆ ಮಳೆ ಬರುವುದು ಎಂಬ ವಾಡಿಕೆ, ನಂಬಿಕೆ ಇದೆ. ಹೀಗಾಗಿ ವರುಣ ದೇವನ ಕೃಪೆ ಗಳಿಸಲು ಗ್ರಾಮಸ್ಥರು ಗುರ್ಜಿ ಪೂಜೆ ಮಾಡಿದರು.

ತಾಲೂಕಿನ ಹಲವು ಕಡೆ ಮುಂಗಾರು ಹಂಗಾಮಿನ ಬಿತ್ತನೆ ಕೈಕೊಳ್ಳಲಾಗಿದೆ. ಆದರೆ ಸಕಾಲಕ್ಕೆ ಮಳೆ ಆಗದೇ ರೈತರನ್ನು ಚಿಂತೆಗೀಡುಮಾಡಿದೆ.

ವರದಿ : ಈರಯ್ಯ ಕುರ್ತಕೋಟಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">