Gangavathi : ಎಐಡಿಎಸ್‌ಒ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ


"ಎಐಡಿಎಸ್‌ಒ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ"

"ಗಂಗಾವತಿಯಲ್ಲಿ ಕನಕಗಿರಿಯ ಬಂಕಾಪುರ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಳೆದ ಜೂನ್ 26 ರಂದು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹೋರಾಟದ ಪ್ರತಿಫಲವಾಗಿ, ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿದ ಮಾನ್ಯ ಡಿಪೋ ಮುಖ್ಯಸ್ಥರು ಇಂದು ಬೆಳಿಗ್ಗೆ 8:00 ಕ್ಕೆ ಕನಕಗಿರಿ ಯಿಂದ ಬಂಕಾಪುರ ಮಾರ್ಗವಾಗಿ ಗಡ್ಡಿ ಉಡುಮ್ಮಲ್ ಆರಳ ವಡ್ರಟ್ಟಿ ಮಾರ್ಗವಾಗಿ ಗಂಗಾವತಿಗೆ,ಮಧ್ಯಾಹ್ನ 2: 00 ಕ್ಕೆ ಕನಕಗಿರಿ ಯಿಂದ ಮತ್ತು ಗಂಗಾವತಿಗೆ ಮತ್ತು ಸಾಯಂಕಾಲ 4:30 ಕ್ಕೆ ಗಂಗಾವತಿಯಿಂದ ಕನಕಗಿರಿಗೆ ಬಸ್ ಸೌಕರ್ಯ ಕಲ್ಪಿಸಿದ್ದಾರೆ, ಇಂದು ತಮ್ಮ ಊರಿಗೆ ಬಸ್ ಬಂದಿರುವುದನ್ನು ಎಲ್ಲಾ ಊರಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೋರಾಟಕ್ಕೆ ಸಂದ ಜಯ ವೆಂದು ಸಂಭ್ರಮಿಸಿದರು.

 ಈ ಸಂದರ್ಭದಲ್ಲಿ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಎಐಡಿಎಸ್ಓ ಪರವಾಗಿ ಹೋರಾಟದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೆಯೇ ಹೋರಾಟಕ್ಕೆ ಸ್ಪಂದಿಸಿದ ಡಿಪೋ ಮುಖ್ಯಸ್ಥರಿಗೂ ಧನ್ಯವಾದಗಳನ್ನು ತಿಳಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">