Job : ಗಂಗಾವತಿ: ಐಟಿಐ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ


 ಗಂಗಾವತಿ: ಐಟಿಐ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

----

ಕೊಪ್ಪಳ : ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಿಗಾಗಿ 2023-24ನೇ ಸಾಲಿನಲ್ಲಿ ಅವಶ್ಯಕತೆ ಇರುವ ಅತಿಥಿಬೋಧಕರ ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಹುದ್ದೆಗಳು, ಅರ್ಹತೆ ವಿವರ: ಖಾಲಿ ಇರುವ ಏಳು ಎಲೆಕ್ಟ್ರೀಷಿಯನ್ ಹುದ್ದೆಗೆ ಐಟಿಐ, ಎಟಿಎಸ್, ಡಿಇಇ ಅಥವಾ ಬಿಇ  ಎಲೆಕ್ಟ್ರೀಷಿಯನ್ ವಿದ್ಯಾರ್ಹತೆ ಹೊಂದಿರಬೇಕು. ಎರಡು ಫಿಟ್ಟರ್ ಹುದ್ದೆಗೆ ಐಟಿಐ, ಎಟಿಎಸ್, ಡಿಎಂಇ ಅಥವಾ ಬಿಇ(ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ಎರಡು ಮೆಕಾನಿಕ್ ಮೋಟರ್ ವೆಹಿಕಲ್ ಹುದ್ದೆಗೆ ಐಟಿಐ, ಎಟಿಎಸ್, ಡಿಪ್ಲೋಮಾ ಇನ್ ಅಟೋಮೊಬೈಲ್ಸ್ ಅಥವಾ ಡಿಎಂಇ ವಿದ್ಯಾರ್ಹತೆ ಹೊಂದಿರಬೇಕು. ಒಂದು ಎಂಜಿನೀಯರಿಂಗ್ ಡ್ರಾಯಿಂಗ್ ಹುದ್ದೆಗೆ ಡಿಎಂಇ ಅಥವಾ ಬಿಇ ವಿದ್ಯಾರ್ಹತೆ ಹೊಂದಿರಬೇಕು. ಎರಡು ವೇಲ್ಡರ್ ಹುದ್ದೆಗೆ ಐಟಿಐ, ಎಟಿಎಸ್ ಅಥವಾ ಡಿಇಇ ವಿದ್ಯಾರ್ಹತೆ ಹೊಂದಿರಬೇಕು. ಒಂದು ಟರ್ನರ್ ಹುದ್ದೆಗೆ ಐಟಿಐ, ಎಟಿಎಸ್ ಅಥವಾ ಡಿಇಇ ವಿದ್ಯಾರ್ಹತೆ ಹೊಂದಿರಬೇಕು. ಈ ಎಲ್ಲಾ ಹುದ್ದೆಗೆಳಿಗೆ ನಿಗದಿತ ವಿದ್ಯಾರ್ಹತೆಹೊಂದಿಗೆ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಆಸಕ್ತ ಅರ್ಹ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆಮೂಲಕ ಜುಲೈ 28ರ ಸಂಜೆ 05 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗಂಗಾವತಿ ಮೊ.ಸಂ: 9448259832, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Previous Post Next Post

Contact Form

f="https://unpkg.com/video.js/dist/video-js.css" rel="stylesheet">